ADVERTISEMENT

ಕೋವಿಡ್-19 | ಸೇನೆಯ ಹಿರಿಯ ಅಧಿಕಾರಿ ಸಾವು

ಪಿಟಿಐ
Published 2 ಜುಲೈ 2020, 14:11 IST
Last Updated 2 ಜುಲೈ 2020, 14:11 IST
   

ಕೋಲ್ಕತ್ತ: ಭಾರತೀಯ ಸೇನೆಯ ಬ್ರಿಗೆಡಿಯರ್‌ರೊಬ್ಬರು ಕೋವಿಡ್‌–19ನಿಂದ ಗುರುವಾರ ಮೃತಪಟ್ಟಿದ್ದಾರೆ. ಇವರು, ಸೋಂಕಿನಿಂದ ಮೃತಪಟ್ಟ ಸೇನೆಯ ಹಿರಿಯ ಅಧಿಕಾರಿ ಆಗಿದ್ದಾರೆ.

ಬ್ರಿಗೆಡಿಯರ್‌ ವಿಕಾಸ್‌ ಸಾಮ್ಯಲ್‌ ಅವರು‌ ಕೋವಿಡ್‌–19 ಕಾರಣ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆಎಂದುಅಧಿಕಾರಿ ಮೂಲಗಳು ತಿಳಿಸಿವೆ.

ವಿಕಾಸ್‌ ಸಾಮ್ಯಲ್‌ ಅವರನ್ನು ಪೂರ್ವ ಕಮಾಂಡ್‌ ಕೇಂದ್ರ ಕಚೇರಿಗೆ ನಿಯೋಜನೆ ಮಾಡಲಾಗಿತ್ತು. ಸೋಂಕು ತಗುಲಿರುವುದು ದೃಢಪಟ್ಟ ನಂತರ ಅವರನ್ನು ಬಾರಕ್‌ಪುರನಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.