ADVERTISEMENT

ಕೋಲ್ಕತ್ತ: ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಬಲಿ, 14 ಜನರಿಗೆ ಗಾಯ

ಪಿಟಿಐ
Published 23 ಅಕ್ಟೋಬರ್ 2018, 16:10 IST
Last Updated 23 ಅಕ್ಟೋಬರ್ 2018, 16:10 IST
ಗಾಯಾಳುಗಳನ್ನು ಹೌರಾದ ಆಸ್ಪತ್ರೆಗೆ ದಾಖಲಿಸಲಾಗಿದೆ -ಎಎನ್‌ಐ ಚಿತ್ರ
ಗಾಯಾಳುಗಳನ್ನು ಹೌರಾದ ಆಸ್ಪತ್ರೆಗೆ ದಾಖಲಿಸಲಾಗಿದೆ -ಎಎನ್‌ಐ ಚಿತ್ರ   

ಕೋಲ್ಕತ್ತ:ಪಶ್ಚಿಮ ಬಂಗಾಳದ ಸಾಂತ್ರಗಚಿ ರೈಲು ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮೃತಪಟ್ಟಿದ್ದು, 14 ಜನ ಗಾಯಗೊಂಡಿದ್ದಾರೆ.

ಸಂಜೆ 6.30ರ ವೇಳೆಗೆ ಒಂದು ಎಕ್ಸ್‌ಪ್ರೆಸ್ ರೈಲು ಮತ್ತು ಎರಡು ಸ್ಥಳೀಯ ರೈಲುಗಳು ಏಕಕಾಲಕ್ಕೆ ನಿಲ್ದಾಣಕ್ಕೆ ಬಂದಾಗ ಅವುಗಳನ್ನೇರಲು ಜನ ಧಾವಿಸಿದ್ದರಿಂದ ಪಾದಚಾರಿ ಮೇಲ್ಸೇತುವೆಯಲ್ಲಿ ಜನಜಂಗುಳಿ ಉಂಟಾಗಿದೆ. ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಆಗ್ನೇಯ ರೈಲ್ವೆಯ ವಕ್ತಾರಸಂಜಯ್ ಘೊಷ್ ತಿಳಿಸಿದ್ದಾರೆ.

ನಾಗರ್‌ಕೊಯಿಲ್–ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಎರಡು ಸ್ಥಳೀಯರೈಲುಗಳು ಏಕಕಾಲಕ್ಕೆ ನಿಲ್ದಾಣಕ್ಕೆ ಬಂದಿವೆ. ಶಾಲಿಮಾರ್–ವಿಶಾಖಪಟ್ಟಣ ಎಕ್ಸ್‌ಪ್ರೆಸ್‌ ಹಾಗೂ ಸಾಂತ್ರಗಚಿ–ಚೆನ್ನೈ ಎಕ್ಸ್‌ಪ್ರೆಸ್‌ಗಳು ಇನ್ನೇನು ನಿಲ್ದಾಣಕ್ಕೆ ಬರಲಿದ್ದವು ಎಂದು ವಕ್ತಾರರು ತಿಳಿಸಿದ್ದಾರೆ. 11 ಜನ ಗಾಯಾಳುಗಳನ್ನು ಹೌರಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.