ADVERTISEMENT

ಹಿಮಾಚಲ ಪ್ರದೇಶ: ಮಧ್ಯಮ ತೀವ್ರತೆಯ ಭೂಕಂಪ

ಪಿಟಿಐ
Published 9 ಸೆಪ್ಟೆಂಬರ್ 2019, 11:31 IST
Last Updated 9 ಸೆಪ್ಟೆಂಬರ್ 2019, 11:31 IST
ರಿಕ್ಟರ್‌ ಮಾಪಕ
ರಿಕ್ಟರ್‌ ಮಾಪಕ   

ನವದೆಹಲಿ: ಹಿಮಾಚಲ ಪ್ರದೇಶ– ಜಮ್ಮು ಮತ್ತು ಕಾಶ್ಮೀರ ಗಡಿ ಬಳಿಯ ಚಂಬಾ ಪ್ರದೇಶದಲ್ಲಿ ಸೋಮವಾರ ಎರಡು ಬಾರಿ ಮಧ್ಯಮ ತೀವ್ರತೆಯ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ರಿಕ್ಟರ್‌ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪನ ಮಧ್ಯಾಹ್ನ 12.10 ಕ್ಕೆ ಹಾಗೂ 2.7 ತೀವ್ರತೆಯ ಭೂಕಂಪನ 12.57ಕ್ಕೆ ಸಂಭವಿಸಿದೆ. ಎರಡು ಭೂಕಂಪನದ ಕೇಂದ್ರ ಬಿಂದುವನ್ನು ಭೂಮಿಯಿಂದ 5 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT