ADVERTISEMENT

ಜೈಪುರ ಸ್ಫೋಟ ಪ್ರಕರಣ: 4 ಮಂದಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 16:03 IST
Last Updated 8 ಏಪ್ರಿಲ್ 2025, 16:03 IST
.
.   

ಜೈಪುರ (ಪಿಟಿಐ): 2008ರಲ್ಲಿ ಜೈಪುರದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ನಾಲ್ಕು ಮಂದಿ ಅಪರಾಧಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಸರ್ವಾರ್ ಅಜ್ಮಿ, ಶಾಬಾಜ್, ಸೈಫುರ್ ರೆಹಮಾನ್ ಮತ್ತು ಮೊಹಮ್ಮದ್ ಸೈಫ್‌ ಶಿಕ್ಷೆಗೆ ಗುರಿಯಾದವರು. ಇವರನ್ನು ಐಪಿಸಿಯ ವಿವಿಧ ಸೆಕ್ಷನ್ನುಗಳು ಮತ್ತು ಯುಎಪಿಎ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಲಾಗಿತ್ತು.

2008ರ ಮೇ 13ರಂದು ಜೈಪುರದಲ್ಲಿ ಎಂಟು ಸರಣಿ ಬಾಂಬ್‌ ಸ್ಫೋಟಗಳು ಸಂಭವಿಸಿದ್ದವು, ಇನ್ನೊಂದು ಬಾಂಬ್‌ಅನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಬಾಂಬ್‌ ಸ್ಫೋಟಕ್ಕೆ ಸಿಲುಕಿ 71 ಮಂದಿ ಪ್ರಾಣ ಕಳೆದುಕೊಂಡಿದ್ದರು, 180 ಜನರಿಗೆ ಗಾಯಗಳಾಗಿದ್ದವು.

ADVERTISEMENT

ಸ್ಫೋಟಕ್ಕೆ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ 2019ರ ಡಿಸೆಂಬರ್‌ನಲ್ಲಿ ನ್ಯಾಯಾಲಯವೊಂದು ಅಜ್ಮಿ, ಸೈಫ್‌, ರೆಹಮಾನ್‌ ಮತ್ತು ಮೊಹಮದ್ ಸಲ್ಮಾನ್‌ಗೆ ಮರಣ ದಂಡನೆ ವಿಧಿಸಿತ್ತು. ಈ ಪ್ರಕರಣದಲ್ಲಿ ಶಾಬಾಜ್‌ನನ್ನು ದೋಷಮುಕ್ತಗೊಳಿಸಲಾಗಿತ್ತು.

ಮರಣ ದಂಡನೆಗೆ ಗುರಿಯಾದವರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರನ್ನು ಆ ಪ್ರಕರಣದಲ್ಲಿ ಹೈಕೋರ್ಟ್‌ ಖುಲಾಸೆಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.