ADVERTISEMENT

ತಹವ್ವುರ್ ರಾಣಾ ಅರ್ಜಿ: ತಿಹಾರ್ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದ ಕೋರ್ಟ್‌

ಪಿಟಿಐ
Published 28 ಮೇ 2025, 14:39 IST
Last Updated 28 ಮೇ 2025, 14:39 IST
<div class="paragraphs"><p>ತಹವ್ವುರ್ ರಾಣಾ</p><p></p></div>

ತಹವ್ವುರ್ ರಾಣಾ

   

– ಪಿಟಿಐ ಚಿತ್ರಗಳು

ADVERTISEMENT

ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹವ್ವುರ್ ಹುಸೇನ್ ರಾಣಾ ತನ್ನ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಕೋರಿದ್ದು, ಆತನ ಕೋರಿಕೆಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ.

ರಾಣಾ ಅರ್ಜಿಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳಿಗೆ ನೋಟಿಸ್‌ ಜಾರಿಗೆ ಸೂಚಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್‌ ಜೀತ್ ಸಿಂಗ್ ಅವರು, ಜೂನ್‌ 4ಕ್ಕೆ ಮೊದಲು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ರಾಣಾ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. 

ಮುಂಬೈ ದಾಳಿ ಪ್ರಕರಣದ ಪ್ರಮುಖ ಸೂತ್ರಧಾರಿ ಡೇವಿಡ್ ಕೊಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟವರ್ತಿ ರಾಣಾ.

ವಿಚಾರಣೆ ಶುರುವಾಗುವುದಕ್ಕೂ ಮೊದಲು, ರಾಣಾ ಪರವಾಗಿ ವಕೀಲರು ಇದ್ದಾರೆಯೇ ಎಂದು ನ್ಯಾಯಾಧೀಶರು ಕೇಳಿದರು. ತನಗೆ ವಕೀಲರು ಇಲ್ಲ ಎಂದು ರಾಣಾ ತಿಳಿಸಿದ. ನಂತರ, ಆತನನ್ನು ಪ್ರತಿನಿಧಿಸಲು ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ನೀಡಲಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು. ಇದಾದ ನಂತರದಲ್ಲಿ ವಕೀಲ ಪೀಯೂಷ್ ಸಚದೇವ ಅವರನ್ನು ರಾಣಾನನ್ನು ಪ್ರತಿನಿಧಿಸಲು ನೇಮಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.