ADVERTISEMENT

ಪಾಕಿಸ್ತಾನದಿಂದ 2,050 ಬಾರಿ ಕದನ ವಿರಾಮ ಉಲ್ಲಂಘನೆ; 21 ಭಾರತೀಯರ ಸಾವು

ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಪಿಟಿಐ
Published 15 ಸೆಪ್ಟೆಂಬರ್ 2019, 15:56 IST
Last Updated 15 ಸೆಪ್ಟೆಂಬರ್ 2019, 15:56 IST
ಗಡಿ ನಿಯಂತ್ರಣ ರೇಖೆಯ ಸಮೀಪ ಕಾಣುತ್ತಿರುವ ಪಾಕಿಸ್ತಾನ ಚೌಕ– ಸಂಗ್ರಹ ಚಿತ್ರ
ಗಡಿ ನಿಯಂತ್ರಣ ರೇಖೆಯ ಸಮೀಪ ಕಾಣುತ್ತಿರುವ ಪಾಕಿಸ್ತಾನ ಚೌಕ– ಸಂಗ್ರಹ ಚಿತ್ರ   

ನವದೆಹಲಿ: ಪಾಕಿಸ್ತಾನ ಈ ವರ್ಷ 2,050 ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ್ದು, ದಾಳಿಯಿಂದಾಗಿ 21 ಭಾರತೀಯರು ಮೃತಪಟ್ಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಹೇಳಿದೆ.

ಉಗ್ರರು ಗಡಿ ದಾಟಲು ಸಹಕರಿಸುತ್ತಿರುವುದು, ಭಾರತೀಯ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದು ಹಾಗೂ ಸರಹದ್ದು ಚೌಕಗಳ ಮೇಲೆ ದಾಳಿಗಳು ಸೇರಿದಂತೆ ಕದನ ವಿರಾಮ ಉಲ್ಲಂಘನೆಯ ಮೂಲಕ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿರುವುದರ ಬಗ್ಗೆ ನಮ್ಮ ಕಳವಳ ವ್ಯಕ್ತಪಡಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

2003ರ ಕದನ ವಿರಾಮ ಒಪ್ಪಂದವನ್ನು ಗೌರವಿಸಿ ನಡೆದುಕೊಳ್ಳುವಂತೆ ಭಾರತ ಪಾಕಿಸ್ತಾನ ಪದೇಪದೆ ತಿಳಿಸುತ್ತಿದೆ. ಗಡಿ ನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಕಾಪಾಡುವಂತೆ ತಿಳಿಸಲಾಗಿದೆಎಂದಿದ್ದಾರೆ.

ADVERTISEMENT

ಕದನ ವಿರಾಮ ಉಲ್ಲಂಘನೆ ಮತ್ತು ಗಡಿದಾಟಿ ಉಗ್ರರ ನುಸುಳುವಿಕೆಯ ಸಂದರ್ಭಗಳಲ್ಲಿ ಭಾರತೀಯ ಭದ್ರತಾ ಪಡೆಗಳು ಅತ್ಯಂತ ಸಂಯಮದಿಂದ ವರ್ತಿಸಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.