ADVERTISEMENT

ಅಸ್ಸಾಂ: ಭೂಕುಸಿತಕ್ಕೆ 21 ಸಾವು

ಪಿಟಿಐ
Published 2 ಜೂನ್ 2020, 20:00 IST
Last Updated 2 ಜೂನ್ 2020, 20:00 IST
ಕರಿಮಗಂಜ್‌ ಜಿಲ್ಲೆಯ ಕರಿಮಪುರದಲ್ಲಿ ಸಂಭವಿಸಿದ ಭೂಕುಸಿತ  –ಪಿಟಿಐ ಚಿತ್ರ
ಕರಿಮಗಂಜ್‌ ಜಿಲ್ಲೆಯ ಕರಿಮಪುರದಲ್ಲಿ ಸಂಭವಿಸಿದ ಭೂಕುಸಿತ  –ಪಿಟಿಐ ಚಿತ್ರ   

ಗುವಾಹಟಿ/ಕರಿಮಗಂಜ್‌/ಸಿಲ್ಚಾರ್: ದಕ್ಷಿಣ ಅಸ್ಸಾಂನಲ್ಲಿ ಸುರಿದ ಸತತ ಮಳೆಯಿಂದಾಗಿ ವಿವಿಧೆಡೆ ಸಂಭವಿಸಿದ ಭೂಕುಸಿತಕ್ಕೆ ಮಂಗಳವಾರ 21 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಹೈಲ್ಕಂಡಿ, ಕರಿಮಗಂಜ್‌ ಮತ್ತು ಚಚಾರ್‌ ಜಿಲ್ಲೆಗಳಲ್ಲಿ ಈ ದುರ್ಘಟನೆಗಳು ಸಂಭವಿಸಿವೆ. ಹೈಲ್ಕಂಡಿ ಜಿಲ್ಲೆಯ ಮೊಹನಪುರ್‌ದಲ್ಲಿ ಸಂಭವಿಸಿದ ಭೂಕುಸಿತದಿಂದ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ.

ಕರಿಮಗಂಜ್‌ ಜಿಲ್ಲೆಯ ಕರಿಮಪುರದಲ್ಲಿ ಸಂಭವಿಸಿದ ಭೂಕುಸಿತದಿಂದ ಒಂದೇ ಕುಟುಂಬದ ಐವರು ಸಾವಿಗೀಡಾಗಿದ್ದಾರೆ. ಇವರಲ್ಲಿ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಚಚಾರ್‌ ಜಿಲ್ಲೆಯ ಕೊಲಾಪುರ ಗ್ರಾಮದಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಭೂಕುಸಿತ ಸಂಭವಿಸಿದ ಮೂರು ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಮೃತರ ಕುಟುಂಬದವರಿಗೆ ತಲಾ ₹ 4ಲಕ್ಷ ನೀಡುವುದಾಗಿ ಅಸ್ಸಾಂ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.