ADVERTISEMENT

ತಮಿಳುನಾಡು: ಸಮುದ್ರ ಸೇರಿದ 2.29 ಲಕ್ಷ ಆಮೆಗಳು

ಪಿಟಿಐ
Published 5 ಮೇ 2025, 15:46 IST
Last Updated 5 ಮೇ 2025, 15:46 IST
   

ಚೆನ್ನೈ: ಪ್ರಸಕ್ತ ಸಾಲಿನ ಸಂತಾನೋತ್ಪತ್ತಿ ಅವಧಿಯಲ್ಲಿ ಆಲಿವ್‌ ರಿಡ್ಲಿ ಆಮೆಗಳು ತಮಿಳುನಾಡಿನಲ್ಲಿ 2.29 ಲಕ್ಷ ಮರಿಗಳಿಗೆ ಜನ್ಮನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿವೆ.

2019–20ನೇ ಸಾಲಿಗೆ ಹೋಲಿಸಿದರೆ, 2024–25ನೇ ಸಾಲಿನಲ್ಲಿ ನಾಲ್ಕು ಪಟ್ಟು ಹೆಚ್ಚು ಮರಿಗಳಿಗೆ ಜನ್ಮನೀಡಿವೆ.

ತಮಿಳುನಾಡಿನ ಕರಾವಳಿಯಲ್ಲಿ ಆಲಿವ್‌ ರಿಡ್ಲಿ ಆಮೆಗಳು 3.19 ಲಕ್ಷ ಮೊಟ್ಟೆಗಳನ್ನಿಟ್ಟಿದ್ದವು. ಇವುಗಳಲ್ಲಿ ಚೆನ್ನೈ ಕಡಲತೀರದಿಂದ ಕಾಂಚೀಪುರವರೆಗೂ ಸಮುದ್ರಕ್ಕೆ ಸೇರಲ್ಪಟ್ಟಿದ್ದ ಒಂದು ಸಾವಿರಕ್ಕೂ ಹೆಚ್ಚು ಮರಿಗಳು ಮೃತಪಟ್ಟಿದ್ದವು. ಈ ಆತಂಕದ ನಡುವೆಯೂ ಪ್ರಸಕ್ತ ಬಾರಿ ದಾಖಲೆ ಸಂಖ್ಯೆಯ ಮರಿಗಳು ಬದುಕುಳಿದಿವೆ.

ADVERTISEMENT

ರಾಜ್ಯದ ಕರಾವಳಿ ತೀರದಲ್ಲಿ 3,19,895 ಮೊಟ್ಟೆಗಳು ಪತ್ತೆಯಾಗಿದ್ದವು. ಇವುಗಳಲ್ಲಿ 2,29,432 ಮರಿಗಳು ಜನ್ಮ ತಾಳಿ ಸಮುದ್ರಕ್ಕೆ ಸೇರಲ್ಪಟ್ಟಿವೆ. ಕಡಲೂರು ತೀರದಲ್ಲಿ 81,662 ಮರಿಗಳು, ಮೈಲಾಡುತುರೈ–38,582 ಹಾಗೂ ಚೆನ್ನೈ ಕಡಲಿಗೆ 37,689 ಮರಿಗಳು ಸೇರಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

2023–24ನೇ ಸಾಲಿನಲ್ಲಿ 2,15,778 ಮರಿಗಳು ಸಮುದ್ರ ಸೇರಿದ್ದವು. ಪ್ರಸಕ್ತ ಸಾಲಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಮರಿಗಳು ಸಮುದ್ರ ಸೇರಿವೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.