ADVERTISEMENT

ಜಾತಿಸೂಚಕ ಘೋಷವಾಕ್ಯಗಳಿದ್ದ 250 ವಾಹನಗಳಿಗೆ ದಂಡ

ಪಿಟಿಐ
Published 26 ಅಕ್ಟೋಬರ್ 2019, 2:05 IST
Last Updated 26 ಅಕ್ಟೋಬರ್ 2019, 2:05 IST
   

ನೊಯಿಡಾ: ನಂಬರ್‌ ಪ್ಲೇಟ್‌ಗಳ ಮೇಲೆಜಾತಿಸೂಚಕ, ನಮ್ಮದೇ ಶ್ರೇಷ್ಠಜಾತಿ ಎಂದು ಬಿಂಬಿಸುವ ಘೋಷವಾಕ್ಯಗಳಿದ್ದ 250 ವಾಹನಗಳ ಮಾಲೀಕರಿಗೆಪೊಲೀಸರು ದಂಡ ವಿಧಿಸಿದ್ದಾರೆ.

ಸುಲಲಿತ ಸಂಚಾರ ಮತ್ತು ಅಪರಾಧ ತಡೆ ಆಂದೋಲನದ ಭಾಗವಾಗಿ ಶುಕ್ರವಾರ ‘ಆಪರೇಶನ್ ಕ್ಲೀನ್’ ಕಾರ್ಯಾಚರಣೆ ನಡೆಸಿರುವಪೊಲೀಸರು ಜನರಲ್ಲಿ ಭೀತಿಹುಟ್ಟಿಸುವಂಥ ಘೋಷವಾಕ್ಯಗಳಿರುವ ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರು.

‘ನಮ್ಮದೇ ಶ್ರೇಷ್ಠ ಜಾತಿ ಎನ್ನುವ ಅರ್ಥದ ಘೋಷವಾಕ್ಯಗಳಿದ್ದ ಒಟ್ಟು133 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆಕ್ಷೇಪಾರ್ಹ ಬರಹಗಳಿದ್ದ ಇತರ 91 ವಾಹನಗಳಿಗೆ ದಂಡ ವಿಧಿಸಿದ್ದೇವೆ. ನಂಬರ್‌ ಪ್ಲೇಟ್‌ ಸರಿಯಿಲ್ಲದ ಅಥವಾ ಅದರ ಮೇಲೆ ಸಲ್ಲದ ಬರವಣಿಗೆ ಇದ್ದ 56 ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗಿದೆ’ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ADVERTISEMENT

ದೀಪಾವಳಿ ಹಿನ್ನೆಲೆಯಲ್ಲಿ ಆಭರಣ ಮಳಿಗೆಗಳು, ಪೆಟ್ರೋಲ್ ಬಂಕ್ ಮತ್ತು ಮಾರುಕಟ್ಟೆಯ ಹಲವು ಮಳಿಗೆಗಳ ಮೇಲೆ ಪೊಲೀಸರು 11 ಗಂಟೆಯವರೆಗೂ ದಾಳಿ ನಡೆಸಿದ್ದರು.

‘ವಾಹನಗಳ ಮೇಲೆ ಜಾತಿಸೂಚಕ ಅಥವಾ ಆಕ್ಷೇಪಾರ್ಹ ಬರಹಗಳಿಗೆ ಕಡಿವಾಣ ಹಾಕಬೇಕಿದೆ. ಇಂಥ ಬರಹಗಳು ಜನರಲ್ಲಿ ಭೀತಿ, ಇರಿಸುಮುರಿಸುಉಂಟು ಮಾಡುತ್ತವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂಥ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಪ್ರತಿಕ್ರಿಯಿಸಿದರು.

ಈ ಪ್ರಕ್ರಿಯೆ ಮುಂದುವರಿಯುತ್ತೆ. ಕಾನೂನು ಕಾಪಾಡಿ, ಟ್ರಾಫಿಕ್ ನಿಯಮಗಳನ್ನು ಪಾಲಿಸಿ. ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಲು ಸಿದ್ಧರಾಗಿ ಎಂದು ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.