ನವದೆಹಲಿ: 26/11 ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನ ಕೈಬರಹ ಹಾಗೂ ಆತನ ಧ್ವನಿಯ ಮಾದರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಸಂಗ್ರಹಿಸಿದೆ.
ದೆಹಲಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ವೈಭವ್ ಕುಮಾರ್ ಅವರ ಎದುರು ರಾಣಾನನ್ನು ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಇದೇ ವೇಳೆ ಆತನ ಕೈಬರಹ ಹಾಗೂ ಧ್ವನಿ ಮಾದರಿಯನ್ನು ಎನ್‌ಐಎ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಕೆಲವು ವರ್ಣಮಾಲೆ ಹಾಗೂ ಸಂಖ್ಯೆಗಳನ್ನು ರಾಣಾ ಬರೆದಿದ್ದಾನೆಂದು ಮೂಲಗಳು ತಿಳಿಸಿವೆ.
ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಜೀತ್ ಸಿಂಗ್ ಅವರು ಏಪ್ರಿಲ್ 30ರಂದು ರಾಣಾನ ಕೈಬರಹ ಹಾಗೂ ಧ್ವನಿ ಮಾದರಿಯನ್ನು ಸಂಗ್ರಹಿಸಲು ಎನ್‌ಐಎಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದರು. ಅದರಂತೆ ಎನ್‌ಐಎ ಮಾದರಿ ಸಂಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.