ADVERTISEMENT

ಕೋವಿಡ್‌–19: ನಗರಸಭೆ ಸದಸ್ಯ ಸಾವು

ಪಿಟಿಐ
Published 27 ಏಪ್ರಿಲ್ 2020, 21:11 IST
Last Updated 27 ಏಪ್ರಿಲ್ 2020, 21:11 IST

ಅಹಮದಾಬಾದ್‌: ಕೋವಿಡ್‌–19ರಿಂದ ಬಳಲುತ್ತಿದ್ದ ಅಹಮದಾಬಾದ್‌ ನಗರಸಭೆಯ 67 ವರ್ಷದ ಕಾಂಗ್ರೆಸ್ ಸದಸ್ಯರೊಬ್ಬರು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಗರಸಭಾ ಸದಸ್ಯರೊಬ್ಬರಿಗೆ ಏಪ್ರಿಲ್ 15ರಂದು ಕೋವಿಡ್–19 ಇರುವುದು ದೃಢಪಟ್ಟಿತ್ತು. ಅವರನ್ನು ಇಲ್ಲಿನಸರ್ದಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಸಾವನ್ನಪ್ಪಿದ್ದಾರೆ’ ಎಂದು ಅಹಮದಾಬಾದ್ ನಗರಸಭೆ ಆಯುಕ್ತ ವಿಜಯ್ ನೆಹ್ರಾ ಸೋಮವಾರ ತಿಳಿಸಿದ್ದಾರೆ.

‘ಮೃತ ವ್ಯಕ್ತಿಯು ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಹೃದಯ ಸ್ಟಂಟ್ ಅಳವಡಿಕೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು’ ಎಂದು ಆಸ್ಪತ್ರೆಯ ಸಿಇಒ ರಮ್ಯಾಭಟ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.