ADVERTISEMENT

ಕಾಶ್ಮೀರ: ನಿರ್ಬಂಧಿತ 2ಜಿ ಇಂಟರ್‌ನೆಟ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 15:30 IST
Last Updated 25 ಜನವರಿ 2020, 15:30 IST
   

ಶ್ರೀನಗರ:ಕಳೆದ ಆರು ತಿಂಗಳಿಂದ ಇಂಟರ್‌ನೆಟ್‌ ಸೇವೆ ಇಲ್ಲದೇ ಬೇಸತ್ತಿದ್ದ ಕಾಶ್ಮೀರ ಕಣಿವೆಯ ಜನರಿಗೆ ಶುಕ್ರವಾರ(ಜ.25)ಮಧ್ಯರಾತ್ರಿಯಿಂದ ಫೋಸ್ಟ್‌ಪೇಯ್ಡ್‌ ಹಾಗೂ ಪ್ರಿಪೇಯ್ಡ್‌ ಮೊಬೈಲ್‌ ಹಾಗೂ ಲ್ಯಾಂಡ್‌ ಲೈನ್‌ಗಳಿಗೆ2ಜಿ ಇಂಟರ್‌ನೆಟ್‌ ಸೇವೆ ಒದಗಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮುಂದಾಗಿದೆ.

ಆಗಸ್ಟ್‌5ರಂದುಜಮ್ಮು ಕಾಶ್ಮೀರದಲ್ಲಿ ಸಂವಿಧಾನದ370ನೆಯ ವಿಧಿಯನ್ನು ರದ್ದುಪಡಿಸಿದ ನಂತರಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೊಂಚ ಪ್ರಮಾಣದಲ್ಲಿ ನಿರ್ಬಂಧಿತ ಇಂಟರ್‌ನೆಟ್‌ ಸೇವೆಯನ್ನು ಒದಗಿಸಿದೆ.

ಸರ್ಕಾರವು301ವೆಬ್‌ಸೈಟ್‌ಗಳನ್ನು ಗುರುತಿಸಿದ್ದು,ಅವುಗಳು ಮಾತ್ರ ಲಭ್ಯವಾಗಲಿವೆ.ಕೆಲ ನಿರ್ಬಂಧದ ನಡುವೆಸಾಮಾಜಿಕ ಜಾಲತಾಣದ ಬಳಕೆಗೂ ಅವಕಾಶ ಕಲ್ಪಿಸಲಾಗಿದ್ದು,ಎಲ್ಲ ನಿರ್ಬಂಧಗಳು ಜನವರಿ31ರವರೆಗೆ ಮುಂದುವರೆಯಲಿದೆ ಎಂದು ಗೃಹ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಸರ್ಕಾರ ನಿಗದಿಪಡಿಸಿದ ವೆಬ್‌ಸೈಟ್‌ಗಳು ಜನರಿಗೆ ಲಭ್ಯವಾಗುವಂತೆ ಹಾಗೂ ಜನರು ಬಳಸುವ ವೆಬ್‌ಸೈಟ್‌ಗಳ ಮೇಲೆ ಕಣ್ಣಿಡುವಂತೆ ಸೇವಾ ಕಂಪೆನಿಗಳಿಗೆ ಸೂಚಿಸಲಾಗಿದ್ದು,ಯಾವುದೇ ರೀತಿಯ ದುರ್ಬಳಕೆ ಕಂಡು ಬಂದರೆ ಸಂಬಂಧಿತ ಸೇವಾ ಕಂಪನಿಗಳು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತಕ್ಷಣವೇ ಸೇವೆ ಒದಗಿಸುವ ಕುರಿತು ಕ್ರಮ ಕೈಗೊಳ್ಳಲು ಎಲ್ಲ ಟೆಲಿಕಾಂ ಹಾಗೂ ಇಂಟರ್‌ ನೆಟ್‌ ಸೇವಾ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ಜಮ್ಮು ಕಾಶ್ಮೀರ ವಲಯದ ಐಜಿಪಿಗೆ ಸೂಚನೆ ನೀಡಲಾಗಿದೆ.

ಕಾಶ್ಮೀರ ಕಣಿವೆಯಲ್ಲಿನಇಂಟರ್‌ನೆಟ್‌ ಸೇವೆಯನಿರ್ಬಂಧಗಳ ಕುರಿತು ಈಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ನನ್ಯಾಯಮೂರ್ತಿಎನ್.ವಿ.ರಮಣ ನೇತೃತ್ವದಪೀಠವು,ಇಂಟರ್ನೆಟ್ ಸಂಪರ್ಕವು ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅವಿಭಾಜ್ಯ ಅಂಗ.ಸರ್ಕಾರದ ನಿರ್ಧಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತದೆ ಎಂಬ ಕಾರಣಕ್ಕೆ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸುವುದು ಸರಿಯಲ್ಲ.ಇಂಟರ್‌ ಸೇವೆ ಒದಗಿಸುವ ಕುರಿತು ವಾರದ ಒಳಗಾಗಿ ಪರಿಶೀಲಿಸುವಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.