ADVERTISEMENT

ಕೋಲ್ಕತ್ತದಲ್ಲಿ ಮೂವರು ಶಂಕಿತ ಉಗ್ರರ ಬಂಧನ

ಪಿಟಿಐ
Published 11 ಜುಲೈ 2021, 11:15 IST
Last Updated 11 ಜುಲೈ 2021, 11:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ (ಪಿಟಿಐ):ಜಮಾತ್‌ ಉಲ್‌ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ಸದಸ್ಯರಾಗಿರುವ ಮೂವರು ಶಂಕಿತ ಉಗ್ರರನ್ನು ಇಲ್ಲಿನ ಹರಿದೇವ್‌ಪುರ್‌ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಸಿಬ್ಬಂದಿ ಖಚಿತ ಸುಳಿವು ಆಧರಿಸಿ ದಾಳಿ ನಡೆಸಿ ಶಂಕಿತ ಉಗ್ರರನ್ನು ಬಂಧಿಸಿದರು. ಬಂಧಿತರು ಕೆಲ ತಿಂಗಳಿನಿಂದ ಬಾಡಿಗೆ ಮನೆಯೊಂದರರಲ್ಲಿ ವಾಸವಿದ್ದರು.

ಪ್ರಕರಣದ ತನಿಖೆಯು ಇನ್ನೂ ಅರಂಭಿಕ ಹಂತದಲ್ಲಿದ್ದು, ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.