ಪಟ್ನಾ (ಪಿಟಿಐ): ನಕಲಿ ವಿಳಾಸ ನೀಡಿ ಬಿಹಾರದಲ್ಲಿ ಪಾಸ್‌ಪೋರ್ಟ್ ಪಡೆದ ಆರೋಪ ಎದುರಿಸುತ್ತಿರುವ ಪುಣೆ ಮೂಲದ ಉದ್ಯಮಿ ಹಸನ್ ಅಲಿ ಖಾನ್ ನನ್ನು ಏಪ್ರಿಲ್ 30ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಸಿಜೆಎಂ ಎಸ್. ಪಿ. ಸಿಂಗ್ ಅವರು ಪಟ್ನಾ ಪೊಲೀಸರಿಗೆ ಸೂಚಿಸಿದ್ದಾರೆ.
ಅಲಿಗೆ ನಕಲಿ ವಿಳಾಸಕ್ಕೆ ಪಾಸ್‌ಪೋರ್ಟ್ ನೀಡಿದ ಬಗೆಗಿನ ದಾಖಲೆಪತ್ರಗಳನ್ನು ಪಟ್ನಾ ಪೊಲೀಸರು ಮಾರ್ಚ್ 24ರಂದು ಇಲ್ಲಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.