ADVERTISEMENT

ಛತ್ತೀಸಗಢ: 30 ನಕ್ಸಲರು ಭದ್ರತಾ ಪಡೆ ಮುಂದೆ ಶರಣು

ಪಿಟಿಐ
Published 14 ಮೇ 2024, 12:39 IST
Last Updated 14 ಮೇ 2024, 12:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ತಮ್ಮ ತಲೆ ಮೇಲೆ ₹39 ಲಕ್ಷ ಬಹುಮಾನ ಘೋಷಣೆಯಾಗಿರುವ 9 ಮಂದಿ ಸೇರಿದಂತೆ 30 ನಕ್ಸಲರು ಭದ್ರತಾ ಪಡೆ ಮತ್ತು ಪೊಲೀಸರ ಎದುರು ಶರಣಾಗಿದ್ದಾರೆ.

ಶರಣಾದವರಲ್ಲಿ 6 ಮಂದಿ ಮಹಿಳೆಯರು ಸೇರಿದ್ದಾರೆ. ಆದಿವಾಸಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಟೊಳ್ಳು ಮಾವೋವಾದಿ ಸಿದ್ಧಾಂತದಿಂದ ಬೇಸತ್ತು ಶರಣಾಗಿರುವುದಾಗಿ ನಕ್ಸಲರು ಹೇಳಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ADVERTISEMENT

ಶರಣಾದ ನಕ್ಸಲರು ಪೊಲೀಸರ ಪುನರ್ವಸತಿ ನೀತಿಯಿಂದಲೂ ಪ್ರೇರಿತರಾಗಿದ್ದಾರೆ ಎಂದೂ ಅದು ಹೇಳಿದೆ.

ಶರಣಾದ 30 ನಕ್ಸಲರ ಪೈಕಿ ತಮ್ಮ ತಲೆ ಮೇಲೆ ತಲಾ ₹8 ಲಕ್ಷ ಬಹುಮಾನ ಘೋಷಣೆಯಾಗಿರುವ ಮಿಟ್ಕಿ ಕಕೇಮ್ ಅಲಿಯಾಸ್ ಸರಿತಾ(35), ಮುರಿಮುಂಡಾ ಅಲಿಯಾಸ್ ಸುಖ್ಮತಿ(32) ಸೇರಿದ್ದಾರೆ.

ಆ ಪೈಕಿ ರಜಿತಾ ವೆಟ್ಟಿ(24), ದೇವೆ ಕೊವಸಿ(24), ಆಯ್ತಾ ಸೋಧಿ(22) ಮತ್ತು ಸಿನಿ ಎಂಬರ ತಲೆ ಮೇಲೆ ತಲೆ ಮೇಲೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮುನ್ನಹೇಮ್ಲಾ (35), ಆಯ್ತು ಮೀದಿಯಂ (38) ಮತ್ತು ಆಯ್ತು ಆಯ್ತು ಕರಮ್(50) ಅವರ ತಲೆ ಮೇಲೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಈ 9 ಮಂದಿ ನಕ್ಸಲರು ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಶರಣಾದ ನಕ್ಸಲರಿಗೆ ತಲಾ ₹25,000 ನೀಡಲಾಗಿದ್ದು, ಸರ್ಕಾರದ ಪುನರ್ವಸತಿ ನೀತಿ ಅನ್ವಯ ಸೌಲಭ್ಯ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.