ADVERTISEMENT

ಆರು ತಿಂಗಳಲ್ಲಿ 32,876 ದೂರು ದಾಖಲು: ಎನ್‌ಎಚ್‌ಆರ್‌ಸಿ

ಪಿಟಿಐ
Published 12 ಅಕ್ಟೋಬರ್ 2020, 16:31 IST
Last Updated 12 ಅಕ್ಟೋಬರ್ 2020, 16:31 IST
ಎಚ್‌.ಎಲ್‌ ದತ್ತು
ಎಚ್‌.ಎಲ್‌ ದತ್ತು    

ನವದೆಹಲಿ: ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಆರು ತಿಂಗಳ ಅವಧಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು(ಎನ್‌ಎಚ್‌ಆರ್‌ಸಿ) 32,876 ದೂರುಗಳನ್ನು ದಾಖಲಿಸಿದೆ ಎಂದು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಸೋಮವಾರ ತಿಳಿಸಿದರು.

‘ಕೋವಿಡ್‌–19 ಕಾರಣದಿಂದಾಗಿ ಈ ವರ್ಷ ಮಾನವ ಸಂಕುಲವೇ ಸಂಕಷ್ಟದಲ್ಲಿದೆ. 2019 ಅ.1ರಿಂದ ಈ ವರ್ಷದ ಸೆ.30ರವರೆಗೆ ಒಟ್ಟು 73,729 ದೂರುಗಳು ದಾಖಲಾಗಿವೆ. ಇವುಗಳಲ್ಲಿ 32,876 ದೂರುಗಳು ಏಪ್ರಿಲ್‌1ರಿಂದ ಸೆ.30ರ ನಡುವೆ ದಾಖಲಾಗಿವೆ. ಇವುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ 29 ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ’ಎಂದು ಆಯೋಗದ 27ನೇ ಸಂಸ್ಥಾಪನಾ ದಿನದ ಅಂಗವಾಗಿ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ದತ್ತು ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT