ADVERTISEMENT

ಲಾವೋಸ್‌ನಲ್ಲಿ ಸೆರೆಯಾಳುಗಳಾಗಿ ಒಡಿಶಾದ 34 ಕಾರ್ಮಿಕರು

ಪಿಟಿಐ
Published 14 ಅಕ್ಟೋಬರ್ 2023, 8:06 IST
Last Updated 14 ಅಕ್ಟೋಬರ್ 2023, 8:06 IST
ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌
ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌   

ಭುವನೇಶ್ವರ: ಒಡಿಶಾದ 34 ಜನರ ಕಾರ್ಮಿಕರ ಗುಂಪೊಂದು ಲಾವೋಸ್‌ನ ಕಂಪನಿಯೊಂದರಲ್ಲಿ ಸೆರೆಯಾಳುಗಳಾಗಿದ್ದು, ತಮ್ಮನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವಂತೆ ಒಡಿಶಾ ಸರ್ಕಾರವನ್ನು ವಿನಂತಿಸಿದ್ದಾರೆ.

ಲಾವೋಸ್‌ನ ಪ್ಲೈವುಡ್‌ ಕಂಪನಿಯೊಂದರಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸುಮಾರು ಒಂದೂವರೆ ತಿಂಗಳ ಹಿಂದೆ ಕಂಪನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಆದರೆ, ನಮ್ಮನ್ನು ಮರಳಿ ನಮ್ಮ ದೇಶಕ್ಕೆ ಹೋಗಲು ಬಿಡುತ್ತಿಲ್ಲ. ವೇತನವನ್ನು ಪಾವತಿಸುತ್ತಿಲ್ಲ. ನಮ್ಮ ಪಾಸ್‌ಪೋರ್ಟ್‌ಗಳನ್ನು ಕಂಪನಿಯು ಇಟ್ಟುಕೊಂಡಿದೆ ಎಂದು ಕಾರ್ಮಿಕರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಕಾರ್ಮಿಕರನ್ನು ಮರಳಿ ರಾಜ್ಯಕ್ಕೆ ಕರೆತರಲು ಬೇಕಾದ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಮಸ್ಯೆ ಕುರಿತು ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರ ಕಚೇರಿ ತಿಳಿಸಿದೆ.

ADVERTISEMENT

ಕಾರ್ಮಿಕರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಲು ಕರೆತರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರ ಕಚೇರಿ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.

‘ನಮಗೆ ತಿನ್ನಲು ಆಹಾರ ಸಿಗುತ್ತಿಲ್ಲ. ನಮ್ಮ ಬಳಿ ಹಣವೂ ಇಲ್ಲ. ಭಾರತಕ್ಕೆ ಹಿಂತಿರುಗಲು ಸಹ ಬಿಡುತ್ತಿಲ್ಲ’ ಎಂದು ಲಾವೋಸ್‌ನಲ್ಲಿ ಬಂಧಿತರಾಗಿರುವ ಕಾರ್ಮಿಕರಲ್ಲಿ ಒಬ್ಬರಾದ ಸರೋಜ್‌ ಪಲೈ ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.