ನವದೆಹಲಿ: ‘ಕಳೆದ 11 ವರ್ಷಗಳಲ್ಲಿ 35 ಸಾವಿರ ಕಿ.ಮೀ. ಉದ್ದದಷ್ಟು ರೈಲು ಮಾರ್ಗ ನಿರ್ಮಿಸಲಾಗಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದರು.
ಅಂತರರಾಷ್ಟ್ರೀಯ ರೈಲ್ವೆ ಉಪಕರಣಗಳ ಪ್ರದರ್ಶನ(ಐಆರ್‌ಇಇ)ದಲ್ಲಿ ಮಾತನಾಡಿದ ಅವರು, ‘46 ಸಾವಿರ ಕಿ.ಮೀ.ಉದ್ದದಷ್ಟು ರೈಲು ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ’ ಎಂದರು.
‘ಬುಲೆಟ್ ರೈಲು ಯೋಜನೆ ಅನುಷ್ಠಾನ ವೇಗವಾಗಿ ನಡೆಯುತ್ತಿದ್ದು, 325 ಕಿ.ಮೀ.ನಷ್ಟು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಸಚಿವ ವೈಷ್ಣವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.