ADVERTISEMENT

ಅಮರನಾಥ ಯಾತ್ರೆ ಮುಕ್ತಾಯ; 3.65 ಲಕ್ಷ ಭಕ್ತರಿಂದ ಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 14:37 IST
Last Updated 12 ಆಗಸ್ಟ್ 2022, 14:37 IST
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗರ್ವನರ್‌ ಮನೋಜ್‌ ಸಿನ್ಹಾ ಗುರುವಾರ ‘ಸಂಪನ್ನ ಪೂಜೆ’ ಮಾಡಿದರು. ಈ ಮೂಲಕ ಈ ವರ್ಷದ ಅಮರನಾಥ ಯಾತ್ರೆಯು ಮುಕ್ತಾಯಗೊಂಡಿತು –ಪಿಟಿಐ ಚಿತ್ರ
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗರ್ವನರ್‌ ಮನೋಜ್‌ ಸಿನ್ಹಾ ಗುರುವಾರ ‘ಸಂಪನ್ನ ಪೂಜೆ’ ಮಾಡಿದರು. ಈ ಮೂಲಕ ಈ ವರ್ಷದ ಅಮರನಾಥ ಯಾತ್ರೆಯು ಮುಕ್ತಾಯಗೊಂಡಿತು –ಪಿಟಿಐ ಚಿತ್ರ   

ಶ್ರೀನಗರ: 43 ದಿನಗಳ ಅಮರನಾಥ ಯಾತ್ರೆಯು ಗುರುವಾರ ಮುಕ್ತಾಯಗೊಂಡಿತು. ಈ ಬಾರಿ ಒಟ್ಟು 3.65 ಲಕ್ಷ ಭಕ್ತರು ಯಾತ್ರೆ ಕೈಗೊಂಡಿದ್ದರು.ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಭಕ್ತರು ಅಮರನಾಥಕ್ಕೆ ಭೇಟಿ ನೀಡಿದ್ದಾರೆ.

‘ವಾತಾವರಣದ ಕಾರಣದಿಂದಾಗಿ ಯಾತ್ರೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಬೇಕಾಗಿ ಬಂತು. ಉಳಿದಂತೆಈ ಬಾರಿಯ ಯಾತ್ರೆ ಬಹುತೇಕ ಶಾಂತಿಯುತವಾಗಿತ್ತು’ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT