ADVERTISEMENT

ಬಾರ್ಜ್‌ ಹಡಗಿನಲ್ಲಿದ್ದವರ ಪೈಕಿ 38 ಜನರು ಇನ್ನೂ ನಾಪತ್ತೆ: ತೀವ್ರಗೊಂಡ ಶೋಧಕಾರ್ಯ

ಪಿಟಿಐ
Published 20 ಮೇ 2021, 7:11 IST
Last Updated 20 ಮೇ 2021, 7:11 IST
ಪಿ305 ಬಾರ್ಜ್‌ನಲ್ಲಿದ್ದವರ ಪೈಕಿ ನಾಪತ್ತೆಯಾಗಿರುವ ಸಿಬ್ಬಂದಿಯ ಪತ್ತೆಗಾಗಿ ನೌಕಾ‍ಪಡೆ ಗುರುವಾರವೂ ಕಾರ್ಯಾಚರಣೆ ನಡೆಸಿತು –ಪಿಟಿಐ ಚಿತ್ರ
ಪಿ305 ಬಾರ್ಜ್‌ನಲ್ಲಿದ್ದವರ ಪೈಕಿ ನಾಪತ್ತೆಯಾಗಿರುವ ಸಿಬ್ಬಂದಿಯ ಪತ್ತೆಗಾಗಿ ನೌಕಾ‍ಪಡೆ ಗುರುವಾರವೂ ಕಾರ್ಯಾಚರಣೆ ನಡೆಸಿತು –ಪಿಟಿಐ ಚಿತ್ರ   

ಮುಂಬೈ: ತೌತೆ ಚಂಡಮಾರುತದ ಹೊಡೆತದಿಂದ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ‘ಪಿ305’ ಬಾರ್ಜ್‌ನಲ್ಲಿದ್ದವರ ಪೈಕಿ ಇನ್ನೂ 38 ಜನರು ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ನೌಕಾಪಡೆಯ ಹಡಗುಗಳು ಗುರುವಾರವೂ ಶೋಧಕಾರ್ಯವನ್ನು ಮುಂದುವರಿಸಿವೆ.

ನಾಪತ್ತೆಯಾಗಿರುವವರು ಜೀವಂತವಾಗಿ ಪತ್ತೆಯಾಗುವ ಭರವಸೆ ಕ್ಷೀಣಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿನ ಕರಾವಳಿಯಲ್ಲಿ ಶೋಧಕಾರ್ಯಕ್ಕೆನೌಕಾಪಡೆ ಗುರುವಾರ ಬೆಳಿಗ್ಗೆ ಪುನಃ ಚಾಲನೆ ನೀಡಿದೆ. ‘ಪಿ305’ ಬಾರ್ಜ್‌ ಚಂಡಮಾರುತಕ್ಕೆ ಸಿಲುಕಿದ್ದ ಸ್ಥಳದಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಇದಕ್ಕಾಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಪಿ305’ ಬಾರ್ಜ್‌ನಲ್ಲಿದ್ದ 261 ಜನರ ಪೈಕಿ 186 ಜನರನ್ನು ರಕ್ಷಿಸಲಾಗಿದೆ. 38 ಜನರು ನಾಪತ್ತೆಯಾಗಿದ್ದು, 37 ಜನರು ಮೃತಪಟ್ಟಿದ್ದಾರೆ. ವರಪ್ರದ ಬೋಟ್‌ನಲ್ಲಿದ್ದ ಇಬ್ಬರನ್ನು ಸಹ ನೌಕಾಪಡೆ ರಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.