ADVERTISEMENT

ಉ.ಪ್ರ | ರಾಮನವಮಿ ಮೆರವಣಿಗೆ ವೇಳೆ ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ನಾಲ್ವರ ಬಂಧನ

ಪಿಟಿಐ
Published 1 ಏಪ್ರಿಲ್ 2023, 5:29 IST
Last Updated 1 ಏಪ್ರಿಲ್ 2023, 5:29 IST
   

ಮಥುರಾ (ಉತ್ತರ ಪ್ರದೇಶ): ರಾಮನವಮಿ ಶೋಭಾಯಾತ್ರೆ ವೇಳೆ ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮಾಲ್‌ ಮಸೀದಿಯ ಸಮೀಪ ಶಾಂತಿಭಂಗ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರನ್ನು ಕಾವ್ಯ, ಹನಿ, ರಾಜೇಶ್‌ ಹಾಗೂ ದೀಪಕ್‌ ಎಂದು ಗುರುತಿಸಲಾಗಿದೆ.

ADVERTISEMENT

ಗುರುವಾರ ನಡೆದ ರಾಮನವಮಿ ಮೆರವಣಿಗೆ ವೇಳೆ ಮಸೀದಿಯ ಸಮೀಪ ಇರುವ ಕಟ್ಟಡವೊಂದರಲ್ಲಿ ಕೇಸರಿ ಧ್ವಜ ಹಾರಿಸಿದ ಆರೋಪ ಇವರ ಮೇಲೆ ಇದೆ.

ಘಿಯಾಮಂಡಿ ‍ಪ್ರದೇಶದಲ್ಲಿರುವ ರಾಮ ಮಂದಿರದ ರಾಮ ಜನ್ಮ ಮಹೋತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯು ಚೌಕ್‌ ಬಜಾರ್‌ ಬಳಿ ತಲುಪಿದಾಗ ಇವರು ಈ ಕೃತ್ಯ ಎಸಗಿದ್ದಾರೆ.

ವಾಹನ ಚಲಾಯಿಸುತ್ತಿದ್ದ ಈ ನಾಲ್ವರು, ಮಸೀದಿಯ ಬಳಿ ಇದ್ದ ಕಟ್ಟಡ ಏರಿ, ಅಲ್ಲಿ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸ್ಥಳದಲ್ಲಿ ಹಿಂದೂ–ಮುಸ್ಲಿಮರ ನಡುವೆ ಕೋಮು ಉದ್ವೇಗಗೊಳಿಸುವ ವಾತಾವರಣ ಸೃಷ್ಠಿಯಾಗಿತ್ತು.

ಕೂಡಲೇ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ, ಸಂಭಾವ್ಯ ಅಪಾಯವನ್ನು ತಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.