ADVERTISEMENT

ದಂತೇವಾಡದಲ್ಲಿ ನಕ್ಸಲರಿಂದ ನೆಲಬಾಂಬ್‌ ಸ್ಫೋಟ: ನಾಲ್ಕು ಸಾವು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 9:33 IST
Last Updated 8 ನವೆಂಬರ್ 2018, 9:33 IST
   

ರಾಯಪುರ: ಛತ್ತೀಸಗಡದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ದಂತೇವಾಡದ ಬಳಿ ಗುರುವಾರ ನಕ್ಸಲೀಯರುಮತ್ತೆ ಅಟ್ಟಹಾಸ ಮೆರೆದಿದ್ದು, ಅವರು ಹುದುಗಿಸಿಟ್ಟಿದ್ದ ಸುಧಾರಿತ ಬಾಂಬ್‌ ಸ್ಫೋಟಕ್ಕೆ ಬಸ್‌ನಲ್ಲಿದ್ದ ನಾಲ್ವರು ಬಲಿಯಾಗಿದ್ದಾರೆ.

ಮೂವರು ನಾಗರಿಕರು ಮತ್ತು ಕೇಂದ್ರ ಕೈಗಾರಿಕ ಮೀಸಲು ಪಡೆಯ (ಸಿಐಎಸ್‌ಎಫ್‌) ಯೋಧರೊಬ್ಬರು ಮೃತಪಟ್ಟಿದ್ದಾರೆ ಎಂದು ಛತ್ತೀಸಗಡ ಪೊಲೀಸರು ಮಾಹಿತಿ ನೀಡಿದ್ದಾರೆ.

ದಂತೇವಾಡ ಸಮೀಪದ ಬಚೇಲಿ ಗುಡ್ಡಗಾಡು ಪ್ರದೇಶದ ರಸ್ತೆಯಲ್ಲಿ ಸುಧಾರಿತ ನೆಲಬಾಂಬ್‌ ಅನ್ನುನಕ್ಸಲರು ಹುದುಗಿಸಿಟ್ಟಿದ್ದರು. ಬಸ್‌ನಲ್ಲಿ ಯೊಧರು ಇರುವುದನ್ನು ಖಚಿತಪಡಿಸಿಕೊಂಡುನಕ್ಸಲರುಬಸ್‌ ಹಾದು ಹೋಗುವ ಸಮಯದಲ್ಲಿ ಬಾಂಬ್‌ ಸ್ಫೋಟಿಸಿದ್ದಾರೆಘಟನೆಯಲ್ಲಿ ಬಸ್‌ ಚಾಲಕ, ನಿರ್ವಾಹಕ,ಕ್ಲಿನರ್‌ ಹಾಗೂ ಸಿಐಎಸ್‌ಎಫ್‌ ಯೋಧ ಮೃತಪಟ್ಟಿದ್ದಾನೆ.

ADVERTISEMENT

ಬಸ್‌ನಲ್ಲಿ ನಾಲ್ವರು ಸಿಐಎಸ್‌ಎಪ್‌ ಯೋಧರು ಪ್ರಯಾಣ ಮಾಡುತ್ತಿದ್ದರು.

ಯೋಧರು ಮಾರುಕಟ್ಟೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ವಿಧಾನಸಭಾ ಚುನಾವಣೆ ನಿಮಿತ್ತ ಸಿಐಎಸ್‌ಎಪ್‌ ಅರೆ ಸೇನಾ ಪಡೆಯನ್ನು ಬಚೇಲಿ ಸಮೀಪದ ಹಳ್ಳಿಯೊಂದರಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.