ಭುವನೇಶ್ವರ: ಒಡಿಶಾದ ಕಂದಮಾಲ್ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ಭಾನುವಾರ ನಡೆದ ಎನೌಕೌಂಟರ್‌ನಲ್ಲಿ 4 ಮಾವೋವಾದಿಗಳು ಮೃತಪಟ್ಟಿದ್ದಾರೆ.
ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆವಿಶೇಷ ಕಾರ್ಯಾಚರಣೆ ಗುಂಪು ಸಿಬ್ಬಂದಿ ಮತ್ತು ಜಿಲ್ಲಾ ಸ್ವಯಂಸೇವಕ ಪಡೆ, ಕಂಧಮಾಲ್ ಜಿಲ್ಲೆಯಲ್ಲಿ ತುಮುಡಿಬಂಧ ಕಾಡಿನಲ್ಲಿ ಭಾನುವಾರ ಬೆಳಿಗ್ಗೆ ಶೋಧ ಕಾರ್ಯಚರಣೆ ನಡೆಸಿದೆ. ಈ ವೇಳೆ ಮಾವೋವಾದಿಗಳುದಾಳಿ ನಡೆಸಿದ್ದರಿಂದ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದವು ಎಂದು ಹಿರಿಯಪೊಲೀಸ್ ಅಧಿಕಾರಿ ಅಭಯ್ ಅವರು ತಿಳಿಸಿದರು.
ಸ್ಥಳದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೃತ ಮಾವೋವಾದಿಗಳು ನಿಷೇಧಿತ ಸಿಪಿಐ ಸಂಘಟನೆಯ ಬನ್ಸಾಧರ-ನಾಗಾವಳಿ-ಘುಮುಸರ್ ವಿಭಾಗದ ಸದಸ್ಯರೆಂದು ಶಂಕಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.