ADVERTISEMENT

ಒಡಿಶಾದಲ್ಲಿ ಪಟಾಕಿ ಅವಘಡ: 40 ಮಂದಿಗೆ ಗಾಯ

ಪಿಟಿಐ
Published 24 ನವೆಂಬರ್ 2022, 1:33 IST
Last Updated 24 ನವೆಂಬರ್ 2022, 1:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ಒಡಿಶಾದ ಕೇಂದ್ರಪಾಡ ಜಿಲ್ಲೆಯ ಬಲಿಯಾ ಬಜಾರ್‌ನಲ್ಲಿ ಕಾರ್ತಿಕೇಶ್ವರ ದೇವರ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭುವನೇಶ್ವರದದಿಂದ 80 ಕಿ.ಮೀ ದೂರದ ಬಲಿಯಾ ಬಜಾರ್‌ನಲ್ಲಿ ಬುಧವಾರ ಪಟಾಕಿ ಅವಘಡ ನಡೆದಿದೆ. ದೇವರ ವಿಸರ್ಜನಾ ಸ್ಥಳದಲ್ಲಿ ವಿವಿಧ ಪೂಜಾ ಪೆಂಡಾಲ್‌ನಲ್ಲಿ ಪಟಾಕಿ ಸಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಪಟಾಕಿಯ ಕಿಡಿಯು ಶೇಖರಿಸಿಟ್ಟ ಪಟಾಕಿ ರಾಶಿಯ ಮೇಲೆ ಬಿದ್ದು ಸ್ಫೋಟಿಸಿ ಅವಘಡ ಸಂಭವಿಸಿದೆ.

ಗಾಯಗೊಂಡ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಗಾಯಗೊಂಡವರನ್ನು ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.