ADVERTISEMENT

NCCಯಲ್ಲಿ ಶೇ 40ರಷ್ಟು ಬಾಲಕಿಯರು | ಸಂಖ್ಯೆ ಇನ್ನಷ್ಟು ಹೆಚ್ಚಿಸಲು ಕ್ರಮ: ಡಿ.ಜಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 14:31 IST
Last Updated 3 ಜನವರಿ 2025, 14:31 IST
ಎನ್‌ಸಿಸಿ ಲಾಂಛನ
ಎನ್‌ಸಿಸಿ ಲಾಂಛನ   

ನವದೆಹಲಿ: ಎನ್‌ಸಿಸಿಯಲ್ಲಿ ಬಾಲಕಿಯರ ಸಂಖ್ಯೆ ಶೇ 40ರಷ್ಟಿದ್ದು, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ವಿಸ್ತರಿಸಲು ಯೋಜಿಸಲಾಗಿದೆ ಎಂದು ಎನ್‌ಸಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್‌ಸಿಸಿಯ ಪ್ರಧಾನ ನಿರ್ದೇಶಕ, ಲೆಫ್ಟಿನೆಂಟ್ ಜನರಲ್ ಗುರ್‌ಬಿರ್‌ಪಲ್ ಸಿಂಗ್ ಈ ವಿಷಯ ತಿಳಿಸಿದರು.

ಶಿಬಿರ ಡಿಸೆಂಬರ್ 30ರಂದು ಆರಂಭವಾಗಿದ್ದು, ವಿವಿಧ ರಾಜ್ಯಗಳ ಒಟ್ಟು 2,361 ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದಾರೆ. ಇವರಲ್ಲಿ 917 ಬಾಲಕಿಯರು ಸೇರಿದ್ದು, ಇದು ಈವರೆಗಿನ ಗರಿಷ್ಠ ಹಾಜರಿಯಾಗಿದೆ ಎಂದು ತಿಳಿಸಿದರು.

ADVERTISEMENT

ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ 114 ಕೆಡೆಟ್‌ಗಳು, ಈಶಾನ್ಯ ವಲಯದಿಂದ ಆಗಮಿಸಿರುವ 178 ಕೆಡೆಟ್‌ಗಳು ಇವರಲ್ಲಿ ಸೇರಿದ್ದಾರೆ. ಸ್ನೇಹಿ ರಾಷ್ಟ್ರಗಳ 15ಕ್ಕೂ ಕೆಡೆಟ್‌ಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ಶಿಬಿರದಲ್ಲಿ ಸರ್ವರ ಒಳಿತಿಗೆ ಪ್ರಾರ್ಥಿಸಿ ಸರ್ವಧರ್ಮ ಪೂಜೆ ನಡೆಸಲಾಗಿದೆ. ಈ ವರ್ಷವೂ ವಿವಿಧ ಸ್ಪರ್ಧೆ ಆಯೋಜಿಸಲಾಗುವುದು. ಎನ್‌ಸಿಸಿಗೆ ಮಂಜೂರಾಗಿರುವ ಒಟ್ಟು ಬಲ 20 ಲಕ್ಷ ಇದ್ದು, ಸದ್ಯ 17 ಲಕ್ಷ ಕೆಡೆಟ್‌ಗಳಿದ್ದಾರೆ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.