ADVERTISEMENT

ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ 40 ವೆಬ್‌ಸೈಟ್‌ಗಳಿಗೆ ನಿಷೇಧ

ಪಿಟಿಐ
Published 5 ಜುಲೈ 2020, 19:39 IST
Last Updated 5 ಜುಲೈ 2020, 19:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪ್ರತ್ಯೇಕವಾದ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಸಿಖ್‌ ಫಾರ್‌ ಜಸ್ಟೀಸ್‌‌ ಸಂಘಟನೆಯ 40 ವೆಬ್‌ಸೈಟ್‌ಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಅಮೆರಿಕ ಮೂಲದ ಈ ಸಂಘಟನೆಯು ಖಲಿಸ್ತಾನ್‌ ಚಳವಳಿಗೆ ಬೆಂಬಲ ನೀಡುತ್ತಿದ್ದು, ಈ ಸಂಘಟನೆಯು ಕಾನೂನುಬಾಹಿರವಾಗಿದೆ. ಬೆಂಬಲಿಗರು ತಮ್ಮ ಹೆಸರು ನೋಂದಾಯಿಸುವ ಅಭಿಯಾನವನ್ನು ಆರಂಭಿಸಿತ್ತು. ಹಾಗಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು 40 ವೆಬ್‌ಸೈಟ್‌ಗಳಿಗೆ ನಿಷೇಧ ಹೇರಲು ಶಿಫಾರಸು ಮಾಡಿತ್ತು ಎಂದು ಗೃಹಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ದೇಶವಿರೋಧಿ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಕಳೆದ ವರ್ಷ ಎಸ್‌ಎಫ್‌ಜೆ ಸಂಘಟನೆಯನ್ನು ನಿಷೇಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.