ADVERTISEMENT

ಛತ್ತೀಸ್‌ಗಢ: ಕಾನ್‌ಸ್ಟೆಬಲ್‌ ಹುದ್ದೆಗೆ 400 ಬುಡಕಟ್ಟು ಯುವಕರ ನೇಮಕ

ಪಿಟಿಐ
Published 7 ಮಾರ್ಚ್ 2023, 14:05 IST
Last Updated 7 ಮಾರ್ಚ್ 2023, 14:05 IST
ಸಾಂದರ್ಭಿಕ ಚಿತ್ರ: ಪಿಟಿಐ
ಸಾಂದರ್ಭಿಕ ಚಿತ್ರ: ಪಿಟಿಐ   

ನವದೆಹಲಿ (ಪಿಟಿಐ): ನಕ್ಸಲ್ ಪೀಡಿತ ಬಿಜಾಪುರ, ದಾಂತೇವಾಡ ಮತ್ತು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಗಳ ಒಳನಾಡು ಪ್ರದೇಶಗಳ 400 ಬುಡಕಟ್ಟು ಯುವಕರನ್ನು ಹೊಸದಾಗಿ ವಿಶೇಷ ನೇಮಕಾತಿ ಅಭಿಯಾನದ ಅಂಗವಾಗಿ ಕಾನ್‌ಸ್ಟೆಬಲ್‌ಗಳಾಗಿ ನೇಮಿಸಲು ಸಿಆರ್‌ಪಿಎಫ್ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವಕರು ‘ಬಸ್ತಾರಿಯಾ ಬೆಟಾಲಿಯನ್‘ ತಂಡದ ಭಾಗವಾಗುವ ಸಾಧ್ಯತೆ ಇದೆ. (ಛತ್ತೀಸ್‌ಗಢದ ಹಿಂದಿನ ಅವಿಭಜಿತ ಬಸ್ತಾರ್ ಜಿಲ್ಲೆಯ ಹೆಸರನ್ನು ತಂಡಕ್ಕೆ ಇಡಲಾಗಿದೆ.)

ಇಂತಹ ನೂರಾರು ಸ್ಥಳೀಯ ಬುಡಕಟ್ಟು ಯುವಕರನ್ನು ಈಗಾಗಲೇ ತರಬೇತಿಯ ನಂತರ ಸಿಆರ್‌ಪಿಎಫ್‌ ನಿಯೋಜಿಸಿದೆ.

ADVERTISEMENT

ನೇಮಕಾತಿ ಪತ್ರವನ್ನು ಆಯ್ಕೆಯಾದ 400 ಯುವಕರಿಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.