ADVERTISEMENT

ತೆಲಂಗಾಣ: 41 ನಕ್ಸಲರು ಶರಣು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:50 IST
Last Updated 19 ಡಿಸೆಂಬರ್ 2025, 14:50 IST
.
.   

ಹೈದರಾಬಾದ್ (ಪಿಟಿಐ): ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿದಂತೆ 41 ಮಂದಿ ಕಾರ್ಯಕರ್ತರು ತೆಲಂಗಾಣ ಪೊಲೀಸರ ಎದುರು ಶರಣಾಗಿದ್ದಾರೆ. ಈ ಬೆಳವಣಿಗೆಯು ನಿಷೇಧಿತ ಸಿಪಿಐ ಸಂಘಟನೆಗೆ ತೀವ್ರ ಹಿನ್ನಡೆಯನ್ನು ತಂದಿದೆ.

‘ಸಿಪಿಐ ಕಾರ್ಯಕರ್ತರು ಶಸ್ತ್ರತ್ಯಾಗ ಮಾಡಿ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ’ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಬಿ.ಶಿವಧರ್‌ ರೆಡ್ಡಿ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಶರಣಾದ ನಕ್ಸಲರು 24 ಬಂದೂಕುಗಳು ಮತ್ತು 733 ಜೀವಂತ ಗುಂಡುಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ’ ಎಂದಿದ್ದಾರೆ.

ADVERTISEMENT

‘ಸಿಪಿಐ ಸಂಘಟನೆಯು ತನ್ನ ಸದಸ್ಯರನ್ನು ಎಲ್ಲೆಂದರಲ್ಲಿ ಮನಬಂದಂತೆ ನಿಯೋಜಿಸುತ್ತಿತ್ತು. ಸದಸ್ಯರ ಅಭಿಪ್ರಾಯವನ್ನೇ ಕೇಳುತ್ತಿರಲಿಲ್ಲ. ಇದರಿಂದ ಬೇಸತ್ತ ಸದಸ್ಯರು ಶರಣಾಗತಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.