ADVERTISEMENT

ಯುಎಪಿಎ: 4,690 ಬಂಧಿತರಲ್ಲಿ 149 ಮಂದಿ ಮಾತ್ರ ಅಪರಾಧಿಗಳು

ಪಿಟಿಐ
Published 3 ಆಗಸ್ಟ್ 2022, 12:31 IST
Last Updated 3 ಆಗಸ್ಟ್ 2022, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 2018ರಿಂದ 2022ರ ಅವಧಿಯಲ್ಲಿ ಒಟ್ಟು4,690 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಕೇವಲ 149 ಮಂದಿಯ ವಿರುದ್ಧ ಮಾತ್ರ ಆರೋಪಗಳು ಸಾಬೀತಾಗಿವೆ’ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಬುಧವಾರ ಹೇಳಿದರು.

‘ಈ ಕಾಯ್ದೆ ಅಡಿ 2020ರಲ್ಲಿ1,321 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 80 ಮಂದಿಯ ವಿರುದ್ಧ ಆರೋಪಗಳು ಸಾಬೀತಾಗಿವೆ. ಅಂತೆಯೇ, 2019ರಲ್ಲಿ1,948 ಬಂಧಿತರಲ್ಲಿ 34 ಹಾಗೂ 2018ರಲ್ಲಿ ಬಂಧಿಸಲಾದ 1,421 ಮಂದಿಯಲ್ಲಿ 35 ವ್ಯಕ್ತಿಗಳ ಮೇಲಿನ ಆರೋಪಗಳು ಸಾಬೀತಾಗಿವೆ’ ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘ಈ ಮೂರು ವರ್ಷದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಮಂದಿಯನ್ನು(1,338) ಬಂಧಿಸಲಾಗಿದೆ. ನಂತರದ ಸ್ಥಾನದಲ್ಲಿ ಮಣಿಪುರ (943) ಮತ್ತು ಮೂರನೇ ಸ್ಥಾನದಲ್ಲಿ ಜಮ್ಮು ಮತ್ತು ಕಾಶ್ಮೀರ (750) ಇದೆ. ಒಟ್ಟು ಬಂಧಿತರಲ್ಲಿ2,488 ಮಂದಿ 18–30 ವಯೋಮಾನಕ್ಕೆ ಸೇರಿದವರು.1,850 ಮಂದಿ 30–45 ವಯೋಮಾನದವರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.