ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಸದರಿಗಾಗಿ ನಿರ್ಮಾಣ ಮಾಡಿರುವ ನೂತನ ವಸತಿ ಸಂಕೀರ್ಣವನ್ನು ಉದ್ಘಾಟಿಸಿದರು.
ಸಂಸತ್ ಭವನದ ಸಮೀಪವಿರುವ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಒಟ್ಟು ನಾಲ್ಕು ಬಹುಮಹಡಿ ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ. ಉದ್ಘಾಟನೆಯಾಗಿರುವ ವಸತಿ ಸಂಕೀರ್ಣಕ್ಕೆ ಬಿಹಾರದ ‘ಕೋಸಿ‘ ನದಿಯ ಹೆಸರನ್ನು ಇಡಲಾಗಿದೆ. ಉಳಿದ ಮೂರು ಬಹುಮಹಡಿ ಕಟ್ಟಡಕ್ಕೆ ಕೃಷ್ಣಾ, ಗೋದಾವರಿ, ಹೂಗ್ಲಿ ನದಿಗಳ ಹೆಸರುಗಳನ್ನು ನಾಮಕರಣ ಮಾಡಲಾಗಿದ್ದು ಇವುಗಳ ಕಾಮಗಾರಿ ನಡೆಯುತ್ತಿದೆ.
ಕೋಸಿ ಬಹುಮಹಡಿ ವಸತಿ ಸಂಕೀರ್ಣದಲ್ಲಿ 5 ಬೆಡ್ ರೂಂನ 184 ಫ್ಲಾಟ್‌ಗಳಿವೆ. ಪ್ರತಿ ಫ್ಲಾಟ್ 5,000 ಚದರ ಅಡಿ ವಿಸ್ತೀರ್ಣ ಹೊಂದಿದೆ. 5 ಬೆಡ್ ರೂಂ, ಒಂದು ಕಚೇರಿ, ಒಂದು ಲಾಂಜ್, ಪ್ರತ್ಯೇಕ ಶೌಚಾಲಯಗಳು, ಅಡುಗೆ ಕೋಣೆ, ಊಟದ ಹಾಲ್ ಇರಲಿದೆ. ಬೆಡ್ ರೂಂ ಹಾಗೂ ಕಚೇರಿಗೆ ಪ್ರತ್ಯೇಕ ಬಾಲ್ಕನಿ ಇರಲಿದೆ.
ಫ್ಲಾಟ್‌ಗೆ ಹೊಂದಿಕೊಂಡಂತೆ ಸಿಬ್ಬಂದಿ ಕ್ವಾಟರ್ಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಅಡುಗೆ ಕೋಣೆ, ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಫ್ಲಾಟ್‌ನಲ್ಲಿ ಸಿಬ್ಬಂದಿ ಹಾಗೂ ಸಂಸದರಿಗೆ ಪ್ರತ್ಯೇಕ ಬಾಗಿಲುಗಳಿವೆ. ಫ್ಲಾಟ್ ಫ್ರಿಡ್ಜ್, ಗೀಸರ್‌ಗಳು, ಎಸಿ, ಸಿಸಿ ಕ್ಯಾಮೆರಾ, ಫೋನ್‌ಗಳು, ಇಂಟರ್‌ನೆಟ್, ಟಿವಿ ಕೆಬಲ್ ಸೌಕರ್ಯ ಇರಲಿದೆ.
ಈ ಬಹುಮಹಡಿ ಕಟ್ಟಡದಲ್ಲಿ ಕ್ಯಾಂಟಿನ್, ಕ್ಲಬ್, ಜಿಮ್, ಯೋಗ ರೂಮ್‌ಗಳು, ಅತಿಥಿಗಳಿಗೆ ರೂಂಗಳು ಹಾಗೂ 612 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಈ ಬಹುಮಹಡಿ ಕಟ್ಟಡಕ್ಕೆ ₹680 ಕೋಟಿ ವೆಚ್ಚಮಾಡಲಾಗಿದೆ. ಇದನ್ನು 9 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.