ADVERTISEMENT

 ₹2.6 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ: ಐವರ ಬಂಧನ

ಪಿಟಿಐ
Published 23 ಜೂನ್ 2023, 14:08 IST
Last Updated 23 ಜೂನ್ 2023, 14:08 IST
.
.   

ನವದೆಹಲಿ:ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂದಾಜು ₹2.6 ಕೋಟಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರನ್ನು ಬಂಧಿಸಿಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಇವರಲ್ಲಿ ಇಬ್ಬರು ಮಂಗಳವಾರ ಬ್ಯಾಂಕಾಕ್‌ನಿಂದ ಆಗಮಿಸಿದ್ದರೆ, ಇನ್ನಿಬ್ಬರು ಬುಧವಾರ ಆಗಮಿಸಿದ್ದಾರೆ. ಇವರ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಪ್ರತಿಯೊಬ್ಬರ ಬ್ಯಾಗ್‌ನಲ್ಲಿ ತಲಾ 1 ಕೆ.ಜಿ. ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ₹ 2.09 ಕೋಟಿ ಆಗಲಿದೆ. ಈ ಚಿನ್ನವನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ಬ್ಯಾಂಕಾಕ್‌ನಿಂದ ಆಗಮಿಸಿದ ವ್ಯಕ್ತಿಯು ತನ್ನ ಗುದನಾಳದಲ್ಲಿ  ಮೊಟ್ಟೆ ಆಕಾರದ ಮಾತ್ರೆ ರೂಪದಲ್ಲಿ 1.07 ಕೆ.ಜಿ. ಚಿನ್ನವಿಟ್ಟುಕೊಂಡಿದ್ದು, ಅದನ್ನು ಕಪ್ಪು ಟೇಪ್‌ನಿಂದ ಸುತ್ತಲಾಗಿತ್ತು. ಇದರ ಮೌಲ್ಯ ₹56.43 ಲಕ್ಷ ಆಗಲಿದೆ. ಈತನನ್ನೂ ಬಂಧಿಸಿದ್ದು, ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.