ADVERTISEMENT

ದೆಹಲಿಗೆ ರೈಲ್ವೆ ಐಸೋಲೇಷನ್‌ ಕೋಚ್‌ಸರ್ಕಾರದ ಮನವಿಗೆ ಸ್ಪಂದಿಸಿದ ಇಲಾಖೆ

ಪಿಟಿಐ
Published 18 ಏಪ್ರಿಲ್ 2021, 12:53 IST
Last Updated 18 ಏಪ್ರಿಲ್ 2021, 12:53 IST
ಕೋವಿಡ್ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳೊಂದಿಗೆ ಪರಿವರ್ತಿಸಲಾದ ರೈಲ್ವೆಯ ಐಸೋಲೇಷನ್ ಕೋಚ್‌ಗಳು (ಸಂಗ್ರಹ ಚಿತ್ರ).
ಕೋವಿಡ್ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳೊಂದಿಗೆ ಪರಿವರ್ತಿಸಲಾದ ರೈಲ್ವೆಯ ಐಸೋಲೇಷನ್ ಕೋಚ್‌ಗಳು (ಸಂಗ್ರಹ ಚಿತ್ರ).   

ನವದೆಹಲಿ: ರೈಲ್ವೆ ಇಲಾಖೆಯು ದೆಹಲಿಯ ಶಕುರ್‌ ಬಸ್ತಿ ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ ಚಿಕಿತ್ಸೆಗೆ ಪೂರಕವಾಗಿ 50 ಐಸೋಲೇಷನ್ ಕೋಚ್‌ಗಳನ್ನು ನಿಯೋಜಿಸಿದೆ. ಇಷ್ಟೇ ಸಂಖ್ಯೆಯ ಕೋಚ್‌ಗಳನ್ನು ಸೋಮವಾರದೊಳಗೆ ಆನಂದ್‌ ವಿಹಾರ ನಿಲ್ದಾಣದಲ್ಲಿಯೂ ನಿಯೋಜಿಸಲಾಗುವುದು ಎಂದು ಇಲಾಖೆಯು ತಿಳಿಸಿದೆ.

ಪ್ರತಿ ಕೋಚ್‌ನಲ್ಲಿಯೂ ಎರಡು ಆಕ್ಸಿಜನ್‌ ಸಿಲಿಂಡರ್‌ಗಳ ಸೌಲಭ್ಯವೂ ಇರಲಿದೆ ಎಂದು ಉತ್ತರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಆಶುತೋಷ್ ಗಂಗಲ್‌ ತಿಳಿಸಿದ್ದಾರೆ. ದೆಹಲಿ ಸರ್ಕಾರ ಈ ಕುರಿತು ಮನವಿ ಮಾಡಿ ಪತ್ರ ಬರೆದಿತ್ತು. ಕೋವಿಡ್ ಪೀಡಿತರ ಚಿಕಿತ್ಸೆಗೆ ಅನುವಾಗುವಂತೆ ಈ ಕೋಚ್‌ಗಳನ್ನು ಪರಿವರ್ತಿಸಲಾಗಿದೆ. ಪ್ರತಿ ಕೋಚ್‌ ಅನ್ನು ಎಂಟು ಕ್ಯಾಬಿನ್ ಆಗಿ ವರ್ಗೀಕರಿಸಿದ್ದು, ಪ್ರತಿ ಕ್ಯಾಬಿನ್‌ನಲ್ಲಿ 16 ಹಾಸಿಗೆಗಳನ್ನು ನಿಯೋಜಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ಆಸನ ವ್ಯವಸ್ಥೆ, ಮೂರು ಶೌಚಾಲಯ, ಸ್ನಾನಗೃಹ ಇರಲಿದೆ.

ಸೊಳ್ಳೆಪರದೆ, ಜೈವಿಕ ಶೌಚಾಲಯ, ವಿದ್ಯುತ್‌ ಸೌಲಭ್ಯ, ಆಕ್ಸಿಜನ್ ಸಿಲಿಂಡರ್ ಇದ್ದು, ಚಿಕಿತ್ಸೆಗೆ ಪೂರಕವಾಗಿ ಸೌಲಭ್ಯ ಒದಗಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.