ADVERTISEMENT

ಯಸ್‌ ಚಂಡಮಾರುತ: ಪರಿಹಾರ ಕೋರಿದ್ದ ಶೇ 50ರಷ್ಟು ಅರ್ಜಿಗಳು ತಿರಸ್ಕೃತ

ಪಿಟಿಐ
Published 4 ಜುಲೈ 2021, 14:11 IST
Last Updated 4 ಜುಲೈ 2021, 14:11 IST
ಯಾಸ್‌
ಯಾಸ್‌   

ಕೋಲ್ಕತ್ತ: ಯಸ್ ಚಂಡಮಾರುತದಿಂದ ಉಂಟಾದ ಹಾನಿಗೆ ಪರಿಹಾರ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ ಸುಮಾರು ಶೇ 50ರಷ್ಟು ಅರ್ಜಿಗಳನ್ನು ‘ನಕಲಿ’ ಎಂದು ಪರಿಗಣಿಸಿ ಪಶ್ಚಿಮ ಬಂಗಾಳ ಸರ್ಕಾರ ತಿರಸ್ಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳು ಪರಿಹಾರ ಕೋರಿ ಸುಮಾರು 3,81,774 ಅರ್ಜಿಗಳು ಸಲ್ಲಿಕೆಯಾಗಿದ್ದವು. ಜೂನ್‌ 18ರಿಂದ 30ರವರೆಗೆ ಅರ್ಜಿಗಳ ಪರಿಶೀಲನಾ ಕಾರ್ಯ ನಡೆದಿದ್ದು, 1,86,815 ಅರ್ಜಿಗಳನ್ನು ತಿರಸ್ಕೃತಗೊಂಡಿವೆ. ಅರ್ಜಿಗಳು ನಕಲಿ ಎಂದು ಕಂಡು ಬಂದ ಕಾರಣ ಕ್ಷೇತ್ರ ಅಭಿವೃದ್ದಿ ಅಧಿಕಾರಿಗಳು ಅಥವಾ ಸ್ಥಳೀಯ ನಗರಾಡಳಿತದ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಮೇ ತಿಂಗಳಲ್ಲಿ ಅಪ್ಪಳಿಸಿದ್ದ ಯಸ್‌ ಚಂಡಮಾರುತವು ಪ್ರಮುಖವಾಗಿ ಎರಡೂ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಸಾಕಷ್ಟು ಹಾನಿ ಮಾಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.