ADVERTISEMENT

ಮಣಿಪುರದಲ್ಲಿ 5.1 ತೀವ್ರತೆಯ ಭೂಕಂಪ

ಏಜೆನ್ಸೀಸ್
Published 25 ಮೇ 2020, 16:08 IST
Last Updated 25 ಮೇ 2020, 16:08 IST
   

ನವದೆಹಲಿ: ಮಣಿಪುರದಲ್ಲಿ ಇಂದು ರಾತ್ರಿ 8.12ರ ಸುಮಾರಿಗೆ ಭೂಕಂಪವಾಗಿದೆ. ಗುವಾಹಟಿ, ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ಈಶಾನ್ಯ ಭಾರತದ ಇತರ ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.

ಮಣಿಪುರದ ಕಾಕ್‌ಚಿಂಗ್‌ನಿಂದ ನೈರುತ್ಯಕ್ಕೆ 11 ಕಿ.ಮೀ ದೂರದಲ್ಲಿ ಭೂಕಂಪವಾಗಿದ್ದು, ಇದರ ತೀವ್ರತೆ‌ ರಿಕ್ಟರ್‌ಮಾಪಕದಲ್ಲಿ 5.1ರಷ್ಟು ದಾಖಲಾಗಿದೆ.ಸದ್ಯಕ್ಕೆ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT