ADVERTISEMENT

ಶಬರಿಮಲೆ ಪ್ರವೇಶಕ್ಕೆ ಮಹಿಳೆಯಗೆ ವಯಸ್ಸಿನ ದಾಖಲೆ ಕಡ್ಡಾಯ

ಪಿಟಿಐ
Published 4 ಜನವರಿ 2018, 14:44 IST
Last Updated 4 ಜನವರಿ 2018, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಮಹಿಳೆಯರು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ವಯಸ್ಸು ದೃಢಿಕರಿಸುವ ದಾಖಲೆ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯ ಈ ದೇವಸ್ಥಾನದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ.

ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುವ ಟ್ರಾವಂಕೂರ್‌ ದೇವಸೊಮ್‌ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್‌, ‘ನಿಷೇಧಿತ ವಯಸ್ಸಿನೊಳಗಿನ ಮಹಿಳೆಯರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಹಾಗಾಗಿ ಈ ನಿಯಮ ಪರಿಚಯಿಸಿದ್ದೇವೆ. ದೇವಾಲಯವಿರುವ ಗಿರಿ ಹತ್ತುವ ಮುನ್ನ ಮಹಿಳೆಯರ ವಯಸ್ಸಿನ ದಾಖಲೆ ಪರಿಶೀಲಿಸುತ್ತೇವೆ. ಆಧಾರ್‌ ಕಾರ್ಡ್‌ನ್ನು ಸಹ ದಾಖಲೆಯಾಗಿ ಪರಿಗಣಿಸುತ್ತೇವೆ. ಇದರಿಂದ ಪೊಲೀಸರು ಹಾಗೂ ದೇವಸ್ಥಾನದ ಅಧಿಕಾರಿಗಳೊಂದಿಗೆ ಮಹಿಳಾ ಭಕ್ತರು ವಾಗ್ವಾದ ನಡೆಸುವುದು ತಪ್ಪಲಿದೆ’ ಎಂದು ತಿಳಿಸಿದ್ದಾರೆ.

‘ಈ ವರ್ಷ ಯಾತ್ರಾರ್ಥಿಗಳಿಗಾಗಿ ನವೆಂಬರ್‌ 15ರಿಂದ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಈ ಅವಧಿಯಲ್ಲಿ ನಿಷೇಧಿತ ವಯಸ್ಸಿನೊಳಗಿನ ಕನಿಷ್ಠ 260 ಮಹಿಳೆಯರು ದೇವಸ್ಥಾನ ಪ್ರವೇಶ ಮಾಡುವುದನ್ನು ತಡೆದಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಮಹಿಳೆಯರಿಗೆ ದೇವಸ್ಥಾನದ ಪ್ರವೇಶ ನಿರಾಕರಿಸಿರುವ ಕುರಿತ ದಾವೆ ಸುಪ್ರೀಂಕೋರ್ಟ್‌ನ ಸಂವಿಧಾನದ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.