ADVERTISEMENT

ಬರಲಿದೆ ಶರವೇಗದ ಅಂತರ್ಜಾಲ ಸೇವೆ

ಫ್ರೆಂಚ್‌ ಗಯಾನಾದಿಂದ ಉಡಾವಣೆಗೆ ಇಸ್ರೊ ಸಿದ್ಧತೆ

ಪಿಟಿಐ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಬರಲಿದೆ ಶರವೇಗದ ಅಂತರ್ಜಾಲ ಸೇವೆ
ಬರಲಿದೆ ಶರವೇಗದ ಅಂತರ್ಜಾಲ ಸೇವೆ   

ದೇಶದಲ್ಲಿ ಆಪ್ಟಿಕಲ್ ಫೈಬರ್ ಅಂತರ್ಜಾಲ ಸಂಪರ್ಕ ಇಲ್ಲದ ಗ್ರಾಮೀಣ ಪ್ರದೇಶಗಳಿಗೂ ‘ಶರವೇಗ’ದ ಅಂತರ್ಜಾಲ ಸಂಪರ್ಕ ಕಲ್ಪಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಜಿಸ್ಯಾಟ್–11’ ಉಪಗ್ರಹವು ಕೆಲವೇ ದಿನಗಳಲ್ಲಿ ಫ್ರೆಂಚ್ ಗಯಾನಾದತ್ತ ಪಯಣ ಬೆಳೆಸಲಿದೆ.

ಇಸ್ರೊ ಈವರೆಗೆ ನಿರ್ಮಿಸಿದ ಅತ್ಯಂತ ದೊಡ್ಡ ಮತ್ತು ಹೆಚ್ಚು ತೂಕದ ಉಪಗ್ರಹವಾದ ಜಿಸ್ಯಾಟ್‌–11 ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವಷ್ಟು ಶಕ್ತಿಯುತವಾದ ರಾಕೆಟ್ ಭಾರತದ ಬಳಿ ಇಲ್ಲ. ಹೀಗಾಗಿ ಫ್ರಾನ್ಸ್‌ನ ಏರಿಯಾನ್–5 ರಾಕೆಟ್‌ನ ಮೂಲಕ ಇದನ್ನು ಉಡಾವಣೆ ಮಾಡಲಾಗುತ್ತದೆ.

ಟ್ರಾನ್ಸ್‌ಪಾಂಡರ್‌ ಬದಲಿಗೆ ಇನ್ಫ್ರಾರೆಡ್ ಕಿರಣ

ADVERTISEMENT

ರೇಡಿಯೊ ಸಂಕೇತಗಳನ್ನು ಸ್ವೀಕರಿಸಿ, ಅವನ್ನು ವಿವಿಧ ತರಂಗಾಂತರಗಳಲ್ಲಿ ರವಾನಿಸುವ ಕೆಲಸವನ್ನು ಮಾಡುವ ಟ್ರಾನ್ಸ್‌ಪಾಂಡರ್‌ಗಳು ಈ ಉಪಗ್ರಹಗಳಲ್ಲಿ ಇಲ್ಲ. ಇದರ ಬದಲಿಗೆ ದತ್ತಾಂಶಗಳನ್ನು ಇನ್ಫ್ರಾರೆಡ್ ಕಿರಣಗಳ ಮೂಲಕ ರವಾನಿಸುವ ತಂತ್ರಜ್ಞಾನವನ್ನು (ಟಿ.ವಿ ಮತ್ತು ಅದರ ರಿಮೋಟ್‌ ನಡುವೆ ಸಂವಹನಕ್ಕೆ ಬಳಸುವಂತದ್ದೇ ತಂತ್ರಜ್ಞಾನ) ಬಳಸಲಾಗಿದೆ. ಈ ಕಿರಣಗಳು ಟ್ರಾನ್ಸ್‌ಪಾಂಡರ್‌ಗಳಿಗಿಂತ ತೀರಾ ವೇಗವಾಗಿ ದತ್ತಾಂಶಗಳನ್ನು ರವಾನಿಸುತ್ತವೆ. ಜತೆಗೆ, ಟ್ರಾನ್ಸ್‌ಪಾಂಡರ್‌ಗಳಂತೆಯೇ ವಿವಿಧ ತರಂಗಾಂತರಗಳ ಕಿರಣಗಳನ್ನು ಹೊಮ್ಮಿಸುವ ಸಾಮರ್ಥ್ಯ ಈ ಉಪಗ್ರಹದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.