ನವದೆಹಲಿ: ‘ಮದರಸಾಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕುವುದು ಶರಿಯಾಗೆ ವಿರುದ್ಧವಾದುದು’ ಎಂದು ದರುಲ್ ಉಲೂಮ್ ಫತ್ವಾ ವಿಭಾಗದ ಮುಖ್ಯಸ್ಥ ಮುಫ್ತಿ ಅರ್ಷದ್ ಫರೂಕಿ ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು ಎಂಬ ಉತ್ತರಾಖಂಡ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯಿಸಿರುವ ಮುಫ್ತಿ, ‘ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿಯವರ ಭಾವಚಿತ್ರ ಹಾಕುವ ಆದೇಶ ಈವರೆಗೂ ಇರಲಿಲ್ಲ. ಇಂತಹ ಆದೇಶ ಈಗೇಕೆ?’ ಎಂದಿದ್ದಾರೆ.
‘ಯಾವುದೇ ಆದೇಶ ಹೊರಡಿಸುವ ಮುನ್ನಾ ಶರಿಯಾ ಬಗ್ಗೆ ಸರ್ಕಾರ ಯೋಚಿಸಬೇಕು. ಇಂತಹ ಆದೇಶಗಳು ಮುಸ್ಲಿಮರ ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ’ ಎಂದು ಮುಫ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.