ADVERTISEMENT

ಜೆಎನ್‌ಯು: ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ನಾಪತ್ತೆ

ಏಜೆನ್ಸೀಸ್
Published 10 ಜನವರಿ 2018, 13:57 IST
Last Updated 10 ಜನವರಿ 2018, 13:57 IST
ಮುಕುಲ್‌ ಜೈನ್‌
ಮುಕುಲ್‌ ಜೈನ್‌   

ನವದೆಹಲಿ: ಇಲ್ಲಿನ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಿಂದ ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ನಾಪತ್ತೆಯಾಗಿದ್ದಾರೆ.

ಸೋಮವಾರ ಕ್ಯಾಂಪಸ್‌ಯಿಂದ ತೆರಳಿದ ಬಳಿಕ ಮುಕುಲ್‌ ಜೈನ್‌ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಕುಲ್‌ ಜೈನ್‌, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ(ಇಗ್ನೊ)ದ ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.  ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ ಲೈಫ್‌ ಸೈನ್ಸ್‌ ವಿಭಾಗದಲ್ಲಿ ಸಹ ಮಾರ್ಗದರ್ಶಕರನ್ನು ಪಡೆದಿದ್ದು, ಅಲ್ಲಿನ ಪ್ರಯೋಗಾಲಯದಲ್ಲಿಯೂ ಸಂಶೋಧನಾ ಕಾರ್ಯ ನಡೆಸುತ್ತಿದ್ದರು. 

ADVERTISEMENT

‘ಮುಕುಲ್‌ ಜೈನ್‌ ಸೋಮವಾರ ಮಧ್ಯಾಹ್ನ 12.30 ಗಂಟೆಗೆ ವಿಶ್ವವಿದ್ಯಾಲಯದ ಪೂರ್ವ ಪ್ರವೇಶ ದ್ವಾರದಿಂದ ಹೊರಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಂಗಳವಾರ ಕುಟುಂಬಸ್ಥರಿಗೆ ದೃಶ್ಯಾವಳಿಗಳನ್ನು ತೋರಿಸಿದ್ದೇವೆ’ ಎಂದು ಮುಖ್ಯ ಭದ್ರತಾ ಅಧಿಕಾರಿ ನವೀನ್ ಯಾದವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.