ADVERTISEMENT

ರನ್‌ವೇಯಲ್ಲಿ ಹಸು: ದಿಕ್ಕು ಬದಲಿಸಿದ ವಿಮಾನಗಳು

ಪಿಟಿಐ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST

ನವದೆಹಲಿ (ಪಿಟಿಐ): ಅಹಮದಾಬಾದ್‌ನ ಸರದಾರ ವಲ್ಲಭಬಾಯಿ ಪಟೇಲ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಹಸುವೊಂದು ನಿಂತ ಕಾರಣ, ಲ್ಯಾಂಡಿಂಗ್‌ ಆಗಬೇಕಿದ್ದ ಎರಡು ಅಂತರರಾಷ್ಟ್ರೀಯ ವಿಮಾನಗಳನ್ನು ಮುಂಬೈಗೆ ಕಳುಹಿಸಲಾಯಿತು. ಇನ್ನು ಹಲವು ವಿಮಾನಗಳು ಇದೇ ಕಾರಣಕ್ಕೆ ವಿಳಂಬ ಆದವು.

ಅಬುದಾಬಿಯಿಂದ ಅಹಮದಾಬಾದ್‌ಗೆ ಬರಬೇಕಿದ್ದ ಇತಿಹಾದ್‌ ವಿಮಾನ ಹಾಗೂ ಒಂದು ಕಾರ್ಗೊ ವಿಮಾನದ ದಿಕ್ಕನ್ನು ಮುಂಬೈನತ್ತ ಬದಲಿಸಲಾಯಿತು ಎಂದು ವಿಮಾನನಿಲ್ದಾಣದ ಮೂಲಗಳು ಹೇಳಿವೆ. ನಸುಕಿನ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

‘ನಿಲ್ದಾಣ ಪ್ರವೇಶಿಸಬೇಕಿದ್ದ ವಾಹನಗಳಿಗಾಗಿ ಮುಖ್ಯದ್ವಾರವನ್ನು ತೆರೆದಾಗ ದನ ಪ್ರವೇಶಿಸಿದೆ. ಅದನ್ನು ಓಡಿಸಲು ಸುಮಾರು ಒಂದೂವರೆ ಗಂಟೆ ಶ್ರಮಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.