ADVERTISEMENT

100ನೇ ಉಪಗ್ರಹ ಉಡಾವಣೆ ಯಶಸ್ಸು ಇಸ್ರೋ ವಿಜ್ಞಾನಿಗಳ ಅದ್ಭುತ ಸಾಧನೆ: ಮೋದಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 3:07 IST
Last Updated 12 ಏಪ್ರಿಲ್ 2018, 3:07 IST
100ನೇ ಉಪಗ್ರಹ ಉಡಾವಣೆ ಯಶಸ್ಸು ಇಸ್ರೋ ವಿಜ್ಞಾನಿಗಳ ಅದ್ಭುತ ಸಾಧನೆ: ಮೋದಿ ಶ್ಲಾಘನೆ
100ನೇ ಉಪಗ್ರಹ ಉಡಾವಣೆ ಯಶಸ್ಸು ಇಸ್ರೋ ವಿಜ್ಞಾನಿಗಳ ಅದ್ಭುತ ಸಾಧನೆ: ಮೋದಿ ಶ್ಲಾಘನೆ   

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿಸಿದ 100ನೇ ಉಪಗ್ರಹ ಉಡಾವಣೆ ಶುಕ್ರವಾರ ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪಿಎಸ್‌ಎಲ್‌ವಿ ಸಿ40 ಯಶಸ್ವಿ ಉಡಾವಣೆ ನಡೆಸಿರುವ ಇಸ್ರೋ ಹಾಗೂ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಹೊಸ ವರ್ಷದ ಈ ಯಶಸ್ಸು ನಮ್ಮ ನಾಗರಿಕರು, ರೈತರು, ಮೀನುಗಾರರು ಸೇರಿದಂತೆ ಮತ್ತಿತರರಿಗೆ ಬಾಹ್ಯಾಕಾಶ ತಂತ್ರಜ್ಞಾನ ದೇಶದ ತ್ವರಿತ ಅಭಿವೃದ್ಧಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

100ನೇ ಉಪಗ್ರಹದ ಉಡಾವಣೆ ಇಸ್ರೋದ ಅದ್ಭುತ ಸಾಧನೆಗೆ ಸಾಕ್ಷಿ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಪ್ರಕಾಶಮಾನವಾದ ಭವಿಷ್ಯ ರೂಪಿಸಿದೆ ಎಂದಿದ್ದಾರೆ.

ಇಂದು ಉಡಾವಣೆಯಾದ 31 ಉಪಗ್ರಹಗಳಲ್ಲಿ, 28 ಇತರ ದೇಶಗಳ ಉಪಗ್ರಹಗಳು ಇವೆ. ಭಾರತದ ಯಶಸ್ಸಿನ ಪ್ರಯೋಜನಗಳು ನಮ್ಮ ಪಾಲುದಾರರಿಗೆ ಲಭ್ಯವಿದೆ! ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.