ADVERTISEMENT

ಓದಿನಲ್ಲಿ ನಿರಾಸಕ್ತಿ: ನಾಲ್ಕನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

ಏಜೆನ್ಸೀಸ್
Published 12 ಜನವರಿ 2018, 10:37 IST
Last Updated 12 ಜನವರಿ 2018, 10:37 IST
ಓದಿನಲ್ಲಿ ನಿರಾಸಕ್ತಿ: ನಾಲ್ಕನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು
ಓದಿನಲ್ಲಿ ನಿರಾಸಕ್ತಿ: ನಾಲ್ಕನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು   

ಭೋಪಾಲ್‌: ಓದಿನಲ್ಲಿ ನಿರಾಸಕ್ತಿ ತೋರಿದ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಗುರುವಾರ ಈ ಘಟನೆ ನಡೆದಿದ್ದು, ‘ಮೃತ ವಿದ್ಯಾರ್ಥಿ ಓದಿನಲ್ಲಿ ನಿರಾಸಕ್ತಿ ಹೊಂದಿದ್ದು, ಆಟವಾಡುವುದರಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದ. ಆದ್ದರಿಂದ ಆತನ ತಾಯಿ ದೂಷಿಸಿದ್ದರು’ ಎಂದು ಪೊಲೀಸ್‌ ಆಧಿಕಾರಿ ರಾಮನ್‌ ಸಿಂಗ್‌ ತಿಳಿಸಿದ್ದಾರೆ.

10 ವರ್ಷದ ವಿದ್ಯಾರ್ಥಿ ಶಾಲೆಯಲ್ಲಿ ಸರಿಯಾಗಿ ಓದುತ್ತಿರಲಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗಿದೆ.

ADVERTISEMENT

‘ವಿದ್ಯಾರ್ಥಿ ಗುರುವಾರ ಬೆಳಿಗ್ಗೆ ಶಾಲೆಗೆ ತೆರಳುವುದಕ್ಕೂ ಮುನ್ನ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಅದನ್ನು ಗಮನಿಸಿದ್ದ ಆತನ ತಾಯಿ ಆಟವಾಡುವುದನ್ನು ನಿಲ್ಲಿಸಿ ಓದಿಕೊಳ್ಳುವಂತೆ ಸೂಚಿಸಿದ್ದರು. ಇದರಿಂದ ಬೇಸರಗೊಂಡ ವಿದ್ಯಾರ್ಥಿ ಕೆಲ ನಿಮಿಷಗಳ ಬಳಿಕ, ಕೋಣೆಗೆ ತೆರಳಿ ನೈಲಾನ್‌ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾನೆ‌’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.