ADVERTISEMENT

ಇಸ್ರೊ: 31 ಉಪಗ್ರಹಗಳ ಯಾನದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 13:39 IST
Last Updated 13 ಜನವರಿ 2018, 13:39 IST
ಇಸ್ರೊ: 31 ಉಪಗ್ರಹಗಳ ಯಾನದ ವಿಡಿಯೊ
ಇಸ್ರೊ: 31 ಉಪಗ್ರಹಗಳ ಯಾನದ ವಿಡಿಯೊ

ಬೆಂಗಳೂರು: ಯಶಸ್ವಿಯಾಗಿ 31 ಉಪಗ್ರಹಗಳನ್ನು ಕಕ್ಷೆ ಸೇರಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್‌ ಯಾನದ ಪ್ರತಿ ಹಂತದ  ಕಾರ್ಯಾಚರಣೆ ಈ ವಿಡಿಯೊದಲ್ಲಿ ದಾಖಲಾಗಿದೆ. ಇಸ್ರೊ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ  ಉಪಗ್ರಹ ಯಾನದ ವಿಡಿಯೊ ಪ್ರಕಟಿಸಿದೆ.

‘ಕಾರ್ಟೊಸ್ಯಾಟ್–2’ ಸರಣಿಯ ಹವಾಮಾನ ನಿಗಾ ಉಪಗ್ರಹ ಹಾಗೂ ಇತರೆ 30 ಉಪಹಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ40 ರಾಕೆಟ್‌ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮುವ ಹಂತದಿಂದ ಹಿಡಿದು ಒಂದೊಂದಾಗಿ ಉಪಗ್ರಹಗಳು ಬೇರ್ಪಟ್ಟು ಕಕ್ಷೆಗೆ ಸೇರುವುದನ್ನು ಕಾಣಬಹುದು.
ಉಪಗ್ರಹವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.

ಪಿಎಸ್‌ಎಲ್‌ವಿ–ಸಿ40 ಗಂಟೆಗೆ 27 ಸಾವಿರ ಕಿ.ಮೀ. ವೇಗದಲ್ಲಿ ಸಾಗುತ್ತಿದೆ, ರಾಕೆಟ್‌ನಿಂದ ಉಪಗ್ರಹಗಳು ನಿಗದಿತ ಕಕ್ಷೆಯಲ್ಲಿ ಬೇರ್ಪಟ್ಟು ದೂರ ಸಾಗುವ ದೃಶ್ಯಗಳನ್ನು ಸಮೀಪದಿಂದ ಕಾಣಬಹುದು.

ADVERTISEMENT

ಭೂಮಿಯ ವಾತಾವರಣವನ್ನು ಸೀಳಿ ಮುನ್ನುಗ್ಗುವಾಗ ಘರ್ಷಣೆಯಿಂದಾಗಿ ಉಂಟಾಗುವ ಅತ್ಯಧಿಕ ಉಷ್ಣತೆಯಲ್ಲಿ ಗಗನನೌಕೆಯ ರಕ್ಷಣೆಗಾಗಿ ಅಳವಡಿಸಿರುವ ಉಷ್ಣ ಕವಚ(ಹೀಟ್‌ ಶೀಲ್ಡ್‌) ಬೇರ್ಪಡುವುದನ್ನು ವಿಡಿಯೊದ 25ನೇ ಸೆಕೆಂಡ್‌ನಲ್ಲಿ ಗಮನಿಸಬಹುದು. ನಂತರ ಕಾರ್ಟೊಸ್ಯಾಟ್–2 ಸರಣಿಯ ಉಪಗ್ರಹ ಬೇರ್ಪಡುತ್ತದೆ.

ಉಡಾವಣೆಗೊಂಡ 17 ನಿಮಿಷಕ್ಕೆ 710 ಕೆ.ಜಿ. ತೂಕದ ಕಾರ್ಟೊಸ್ಯಾಟ್ 505 ಕಿ.ಮೀ ದೂರದ ಧ್ರುವೀಯ ಸೂರ್ಯ ಸಮನ್ವಯ ಕಕ್ಷೆಯನ್ನು ಸೇರಿತು. ನ್ಯಾನೊ ಮತ್ತು ಭಾರತದ ದೇಶೀಯ ನಿರ್ಮಿತ 100ನೇ ಉಪಗ್ರಹ ಮೈಕ್ರೊಸ್ಯಾಟ್‌ ಸೇರಿ ಇತರ ಉಪಗ್ರಹಗಳು ಏಳು ನಿಮಿಷದ ಅಂತರದಲ್ಲಿ ಒಂದೊಂದಾಗಿ ಕಕ್ಷೆಯನ್ನು ಸೇರಿಕೊಂಡವು.

ಉಡಾವಣೆಗೊಂಡ 2 ಗಂಟೆ 21 ನಿಮಿಷದ ಬಳಿಕ ನಾಲ್ಕನೇ ಹಂತ ಪೂರ್ಣಗೊಂಡು ಕಾರ್ಯಾಚರಣೆ ಮುಗಿಯಿತು. ಇದನ್ನು 2 ನಿಮಿಷ 25 ಸೆಕೆಂಡ್‌ಗಳ ವಿಡಿಯೊದಲ್ಲಿ ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಲಾಗಿದೆ.

* ಒಟ್ಟು ಉಪಗ್ರಹಗಳ ಸಂಖ್ಯೆ 31

*ಪಿಎಸ್‌ಎಲ್‌ವಿ ಸಿ–40 ರಾಕೆಟ್ ಬಳಕೆ

*ಅಮೆರಿಕ, ಇಂಗ್ಲೆಂಡ್, ಕೆನಡಾ, ಫಿನ್ಲೆಂಡ್, ಫ್ರಾನ್ಸ್, ದಕ್ಷಿಣ ಕೊರಿಯಾದ ಉಪಗ್ರಹಗಳ ಉಡಾವಣೆ

*ಈ ಪೈಕಿ 25 ನ್ಯಾನೊ ಮತ್ತು 3 ಮೈಕ್ರೊ ಉಪಗ್ರಹಗಳ ಒಟ್ಟು ತೂಕ 613 ಕೆ.ಜಿ.

*ಕಾರ್ಟೊಸ್ಯಾಟ್–2 ಉಪಗ್ರಹದ ತೂಕ 710 ಕೆ.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.