ADVERTISEMENT

ಗುಜರಾತ್: ಹಡಗಿಗೆ ಬೆಂಕಿ–ಸಿಬ್ಬಂದಿ ರಕ್ಷಣೆ

ಪಿಟಿಐ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
ಕಾಂಡ್ಲಾದ ದೀನದಯಾಳ್ ಬಂದರಿನಿಂದ 15 ನಾಟಿಕಲ್ ಮೈಲು ದೂರದಲ್ಲಿ ಹಡಗಿಗೆ ತಗುಲಿದ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಗುರುವಾರ ನಿರತರಾಗಿದ್ದರು –ಪಿಟಿಐ ಚಿತ್ರ
ಕಾಂಡ್ಲಾದ ದೀನದಯಾಳ್ ಬಂದರಿನಿಂದ 15 ನಾಟಿಕಲ್ ಮೈಲು ದೂರದಲ್ಲಿ ಹಡಗಿಗೆ ತಗುಲಿದ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಗುರುವಾರ ನಿರತರಾಗಿದ್ದರು –ಪಿಟಿಐ ಚಿತ್ರ   

ಅಹಮದಾಬಾದ್: ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ತೈಲ ಹೊತ್ತು ಸಾಗುತ್ತಿದ್ದ ವಾಣಿಜ್ಯ ಹಡಗಿಗೆ ಬುಧವಾರ ಸಂಜೆ ಬೆಂಕಿ ತಗುಲಿದೆ. ಹಡಗಿನಲ್ಲಿ 30 ಸಾವಿರ ಟನ್ ಹೈಸ್ಪೀಡ್ ತೈಲ ಇತ್ತು.

ಕಾಂಡ್ಲಾದ ದೀನದಯಾಳ್ ಬಂದರಿನಿಂದ 15 ನಾಟಿಕಲ್ ಮೈಲು ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಡಗಿನ ಸಿಬ್ಬಂದಿ ಇದ್ದ ವಿಭಾಗಕ್ಕೆ ಬೆಂಕಿ ತಗುಲಿದೆ.

‘ಬುಧವಾರ ರಾತ್ರಿಯಿಡೀ ಬೆಂಕಿ ಆರಿಸುವ ಕಾರ್ಯ ನಡೆದಿದ್ದು, ಇನ್ನೂ ಮುಂದುವರಿದಿದೆ. ಹಡಗಿನಿಂದ ಸಮುದ್ರಕ್ಕೆ ತೈಲ ಸೋರಿಕೆ ಆಗಿಲ್ಲ’ ಎಂದು ಕರಾವಳಿ ರಕ್ಷಣಾ ಪಡೆ ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.