ADVERTISEMENT

‘ಕಾಶ್ಮೀರವನ್ನು ಯುದ್ಧದ ಮೈದಾನದ ಬದಲು ಸ್ನೇಹದ ಸೇತುವೆಯಾಗಿಸಿ’

ಪ್ರಧಾನಿ ಮತ್ತು ಪಾಕಿಸ್ತಾನಕ್ಕೆ ಮೆಹಬೂಬಾ ಮುಫ್ತಿ ಮನವಿ

ಏಜೆನ್ಸೀಸ್
Published 21 ಜನವರಿ 2018, 9:58 IST
Last Updated 21 ಜನವರಿ 2018, 9:58 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ನವದೆಹಲಿ: ‘ರಾಜ್ಯವನ್ನು ಯುದ್ಧದ ಮೈದಾನ ಮಾಡುವ ಬದಲು, ಸ್ನೇಹದ ಸೇತುವೆಯಾಗಿಸಿ’ ಎಂದು ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದಾರೆ.

‘ನಮ್ಮ ಗಡಿಯಲ್ಲಿ ಇಂದು ರಕ್ತದೊಕುಳಿ ನಡೆಯುತ್ತಿದೆ. ಪ್ರಧಾನಿಯವರು ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅವರ ಹೇಳಿಕೆಗೆ ವಿರುದ್ಧವಾದ ವಿದ್ಯಮಾನಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿವೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿ’ ಎಂದು ಅವರು ಪ್ರಧಾನಿ ಮತ್ತು ಪಾಕಿಸ್ತಾನದ ಆಡಳಿತಗಾರರಿಗೆ ಮನವಿ ಮಾಡಿದರು.

ರಾಜ್ಯದ ಪೊಲೀಸ್‌ ಇಲಾಖೆಯು ಬಾರಾಮುಲ್ಲಾದಲ್ಲಿ ಭಾನುವಾರ ಆಯೋಜಿಸಿದ್ದ ಹೊಸ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಗುರುತರ ಹೊಣೆಗಾರಿಕೆ ಇಲಾಖೆ ಮೇಲಿದೆ. ಇಲ್ಲಿ ಶಾಂತಿ ಕಾಪಾಡಲು ನಿಮ್ಮ ಜನಗಳನ್ನೆ ನೀವು ಎದುರಿಸುವ ಪರಿಸ್ಥಿತಿ ಇದೆ. ಹಾಗಾಗಿ ಅವರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.