ADVERTISEMENT

ಲಡಾಖ್‌ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು

ಪಿಟಿಐ
Published 18 ಡಿಸೆಂಬರ್ 2023, 11:52 IST
Last Updated 18 ಡಿಸೆಂಬರ್ 2023, 11:52 IST
 ಭೂಕಂಪ
ಭೂಕಂಪ    (ಪ್ರಾತಿನಿಧಿಕ ಚಿತ್ರ)

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಸೋಮವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್‌) ತಿಳಿಸಿದೆ.

ಘಟನೆಯಲ್ಲಿ ಈವರೆಗೆ ಆಸ್ತಿಪಾಸ್ತಿ ಹಾನಿ ಸೇರಿದಂತೆ ಯಾವುದೇ ಸಾವು–ನೋವು ವರದಿಯಾಗಿಲ್ಲ. ಇಂದು ಮಧ್ಯಾಹ್ನ 3.48ಕ್ಕೆ ಭೂಕಂಪ ಸಂಭವಿಸಿದೆ. ಕಾರ್ಗಿಲ್ ಕೇಂದ್ರಬಿಂದು ಆಗಿತ್ತು.

ಭೂಮಿಯ ಮೇಲ್ಮೈಯಿಂದ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.