ADVERTISEMENT

ಕಾಂಬೋಡಿಯಾ ಭಾರತ ಮಾತುಕತೆ

ಪಿಟಿಐ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST

ನವದೆಹಲಿ: ಆಗ್ನೇಯ ಏಷ್ಯಾ ಭಾಗದ ಸಾಗರ ಮತ್ತು ಸಮುದ್ರಗಳಲ್ಲಿ ಸಂಚರಿಸಲು ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂಬ ಭಾರತದ ಬೇಡಿಕೆಗೆ ಚೀನಾದ ಆಪ್ತ ರಾಷ್ಟ್ರ ಕಾಂಬೋಡಿಯಾ ಧ್ವನಿಗೂಡಿಸಿದೆ.

ಪ್ರಧಾನಿ ಮೋದಿ ಮತ್ತು ಕಾಂಬೋಡಿಯಾ ಪ್ರಧಾನಿ ಹುನ್‌ ಸೆನ್‌ ಅವರ ನಡುವೆ ಶನಿವಾರನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಅದು ಈ ನಿಲುವು ವ್ಯಕ್ತಪಡಿಸಿದೆ.

ಕಡಲು ಕಾನೂನಿಗೆ ಸಂಬಂಧಿಸಿದ 1982ರ ವಿಶ್ವ ಸಂಸ್ಥೆ ಒಪ್ಪಂದದ (ಯುಎನ್‌ಸಿಎಲ್‌ಒಎಸ್‌) ಮೂಲಕ ಜಾರಿಗೆ ತರಲಾಗಿರುವ ಅಂತರರಾಷ್ಟ್ರೀಯ ಕಾನೂನಿನ ಆಧಾರದಲ್ಲಿ ಸಮುದ್ರಮತ್ತು ಸಾಗರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಪೆಸಿಫಿಕ್‌ ನಿರ್ಣಯ ಅಂಗೀಕರಿಸಬೇಕು ಎಂಬ ಭಾರತದ ಅಭಿಪ್ರಾಯವನ್ನು ಹುನ್‌ ಸೆನ್‌ ಬೆಂಬಲಿಸಿದ್ದಾರೆ.

ADVERTISEMENT

ನಾಲ್ಕು ಒಪ್ಪಂದ: ದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಉಭಯ ನಾಯಕರ ನಡುವಣ ಮಾತುಕತೆಯ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.