ADVERTISEMENT

‘ರಾಷ್ಟ್ರಮಂಚ್‌’ಗೆ ತೆಲಂಗಾಣ ಬಿಜೆಪಿ ಗರಂ

ಪಿಟಿಐ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ಹೈದರಾಬಾದ್‌ (ಪಿಟಿಐ): ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ‘ರಾಷ್ಟ್ರ ಮಂಚ್’ ಎಂಬ ವಿಚಾರ ವೇದಿಕೆ ಸ್ಥಾಪಿಸಿರುವುದಕ್ಕೆ ಕಿಡಿ ಕಾರಿರುವ ತೆಲಂಗಾಣ ಬಿಜೆಪಿ ಘಟಕ, ಯಶವಂತ ಸಿನ್ಹಾ ಹಾಗೂ ಇದರ ನೇತೃತ್ವ ವಹಿಸಿರುವ ಸಂಸದ ಶತ್ರುಘ್ನ ಸಿನ್ಹಾ ಇಬ್ಬರೂ ಪಕ್ಷವನ್ನು ತೊರೆಯಬೇಕು ಎಂದು ಆಗ್ರಹಿಸಿದ್ದಾರೆ.

‘ನಮ್ಮ ರಾಷ್ಟ್ರೀಯ ಪಕ್ಷಕ್ಕೆ ಅದರದ್ದೇ ಆದ ಶಿಷ್ಟಾಚಾರವಿದೆ. ಆದರೆ ಈ ಇಬ್ಬರು ನಾಯಕರು ಎಲ್ಲಾ ಮಿತಿಯನ್ನು ಮೀರಿ ನಡೆದುಕೊಂಡಿದ್ದಾರೆ’ ಎಂದು ಪಕ್ಷದ ತೆಲಂಗಾಣ ವಕ್ತಾರ ಕೃಷ್ಣಸಾಗರ ರಾವ್‌ ಹೇಳಿದ್ದಾರೆ.

ಇವರಿಬ್ಬರೂ ಹಿರಿಯ ನಾಯಕರಿದ್ದು, ಪಕ್ಷವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಮಾಡಬೇಕಿದೆ. ರಾಜೀನಾಮೆಯ ನಂತರ ಏನು ಬೇಕಾದರೂ ಇಷ್ಟಬಂದಂತೆ ಮಾಡಿಕೊಳ್ಳಲಿ’ ಎಂದು ರಾವ್‌ ಹರಿಹಾಯ್ದಿದ್ದಾರೆ.

ADVERTISEMENT

ಮಂಗಳವಾರ ನಡೆದ ವೇದಿಕೆಯ ಉದ್ಘಾಟನೆ ವೇಳೆ ಟಿಎಂಸಿಯ ದಿನೇಶ್ ತ್ರಿವೇದಿ, ಕಾಂಗ್ರೆಸ್‌ನ ರೇಣುಕಾ ಚೌಧರಿ, ಎನ್‌ಸಿಪಿಯ ಮಜೀದ್ ಮೆಮನ್, ಎಎಪಿಯ ಸಂಜಯ್ ಸಿಂಗ್, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ ಮತ್ತು ಜೆಡಿಯು ನಾಯಕ ಪವನ್ ವರ್ಮಾ ಭಾಗ
ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.