ADVERTISEMENT

ದೇಶದ ರಕ್ಷಣೆಗೆ ಅಲ್ಪ ಆದ್ಯತೆ!

ಶೇ7.81ರಷ್ಟು ಮಾತ್ರ ಅನುದಾನ ಏರಿಕೆ* ಶಸ್ತ್ರಾಸ್ತ್ರ ಖರೀದಿಗೆ ಕಡಿಮೆ ಹಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ದೇಶದ ರಕ್ಷಣೆಗೆ ಅಲ್ಪ ಆದ್ಯತೆ!
ದೇಶದ ರಕ್ಷಣೆಗೆ ಅಲ್ಪ ಆದ್ಯತೆ!   

ನವದೆಹಲಿ: ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ₹2.95 ಲಕ್ಷ ಕೋಟಿ ನೀಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಮೊತ್ತದಲ್ಲಿ ಶೇ7.81ರಷ್ಟು ಮಾತ್ರ ಹೆಚ್ಚಳವಾಗಿದೆ. ಕಳೆದ ಬಾರಿ ರಕ್ಷಣಾ ವಲಯಕ್ಕೆ ₹2.74 ಲಕ್ಷ ಕೋಟಿ ನೀಡಲಾಗಿತ್ತು.

ಈ ಮೊತ್ತ 2018–19ರ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 1.58ರಷ್ಟು ಮತ್ತು ಒಟ್ಟು ಬಜೆಟ್‌ನ ಶೇ 12.10 ಮಾತ್ರ.

1962ರಿಂದ ಈಚೆಗೆ ರಕ್ಷಣೆಗೆ ನೀಡಿದ ಅತ್ಯಂತ ಕಡಿಮೆ ಏರಿಕೆ ಇದಾಗಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ 2017–18ರಲ್ಲಿ ಶೇ 6.2ರಷ್ಟು ಮತ್ತು 2016–17ರಲ್ಲಿ ಶೇ9.76ರಷ್ಟು ಹೆಚ್ಚಿನ ಅನುದಾನ ತೆಗೆದಿಡಲಾಗಿತ್ತು.

ಶಸ್ತ್ರಾಸ್ತ್ರಗಳಿಗೆ ಅಲ್ಪ ಮೊತ್ತ!

₹2,95,511 ಕೋಟಿ ಮೊತ್ತದ ರಕ್ಷಣಾ ಬಜೆಟ್‌ನಲ್ಲಿ ಶಸ್ತ್ರಾಸ್ತ್ರ, ಯುದ್ಧ ವಿಮಾನ, ನೌಕೆ ಹಾಗೂ ಇನ್ನಿತರ ರಕ್ಷಣಾ ಸಲಕರಣೆ ಖರೀದಿಗೆ ಕೇವಲ ₹99,947 ಕೋಟಿಯಷ್ಟು ಮಾತ್ರ ತೆಗೆದಿಡಲಾಗಿದೆ.

ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ಹೆಚ್ಚಾದ ಘರ್ಷಣೆ ಹಾಗೂ ಭದ್ರತಾ ಪಡೆಗಳ ಆಧುನೀಕರಣಕ್ಕೆ ಮುಂದಾಗಿದ್ದ ಸರ್ಕಾರ ಈ ಬಾರಿ ಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಭಾರಿ ಹೆಚ್ಚಳ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.