ADVERTISEMENT

ಕಲ್ಲು ತೂರಾಟ ಪ್ರಕರಣ ಹಿಂಪಡೆಯಲು ಜಮ್ಮು–ಕಾಶ್ಮೀರ ಸರ್ಕಾರ ನಿರ್ಧಾರ: 9,730 ಮಂದಿಗೆ ಕ್ಷಮಾದಾನ

ಪಿಟಿಐ
Published 3 ಫೆಬ್ರುವರಿ 2018, 12:38 IST
Last Updated 3 ಫೆಬ್ರುವರಿ 2018, 12:38 IST
ಕಲ್ಲು ತೂರಾಟ ಪ್ರಕರಣ ಹಿಂಪಡೆಯಲು ಜಮ್ಮು–ಕಾಶ್ಮೀರ ಸರ್ಕಾರ ನಿರ್ಧಾರ: 9,730 ಮಂದಿಗೆ ಕ್ಷಮಾದಾನ
ಕಲ್ಲು ತೂರಾಟ ಪ್ರಕರಣ ಹಿಂಪಡೆಯಲು ಜಮ್ಮು–ಕಾಶ್ಮೀರ ಸರ್ಕಾರ ನಿರ್ಧಾರ: 9,730 ಮಂದಿಗೆ ಕ್ಷಮಾದಾನ   

ಜಮ್ಮುಕಾಶ್ಮೀರ: ಕಲ್ಲು ತೂರಾಟ ಪ್ರಕರಣಗಳಲ್ಲಿ 9,730 ಮಂದಿ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಜಮ್ಮು ಮತ್ತು ಕಾಶ್ಮೀರ ಅನುಮೋದಿಸಿರುವುದಾಗಿ ಶನಿವಾರ ಮುಖ್ಯಮಂತ್ರಿ ಮೆಹಾಬೂಬಾ ಮುಫ್ತಿ ಹೇಳಿದ್ದಾರೆ.

ಸರ್ಕಾರದಿಂದ ರಚಿಸಲಾಗಿದ್ದ ಸಮಿತಿಯ ಶಿಫಾರಸಿನ ಅನ್ವಯ ಕಲ್ಲು ತೂರಾಟಕ್ಕೆ ಸಂಬಂಧಿಸಿದ 1,745 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 2008ರಿಂದ 2017ರ ವರೆಗೂ ನಡೆದ ಘಟನೆಗಳಲ್ಲಿ 9 ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.

2016 ಹಾಗೂ 2017ರಲ್ಲಿ ನಡೆದ ಕಲ್ಲು ತೂರಾಟದಲ್ಲಿ ಮೊದಲ ಬಾರಿ ಅಪರಾಧಿ ಪಟ್ಟಿ ಸೇರಿದ್ದವರಿಗೆ ಜಮ್ಮ–ಕಾಶ್ಮೀರ ಸರ್ಕಾರ ಕ್ಷಮಾದಾನ ನೀಡಲು ಕ್ರಮಕೈಗೊಂಡಿರುವುದಾಗಿ ಮುಫ್ತಿ ತಿಳಿಸಿದರು.

ADVERTISEMENT

ಕಳೆದ ಎರಡು ವರ್ಷಗಳಲ್ಲಿ 3,773 ಪ್ರಕರಣಗಳು ದಾಖಲಾಗಿದ್ದು, 11,290 ಜನರನ್ನು ಬಂದಿಸಲಾಗಿತ್ತು. 2016ರಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಬುರ್ಹನ್‌ ಸಾವಿನ ನಂತರ ಕಾಶ್ಮೀರದಲ್ಲಿ ಉಂಟಾಗಿದ್ದ ಗಲಭೆಯಲ್ಲಿ 85 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.