ADVERTISEMENT

ಕಾಸ್‌ಗಂಜ್ ಹಿಂಸಾಚಾರ: ಇದೊಂದು ಸಣ್ಣ ಘಟನೆ, ಮಹತ್ವ ಕೊಡಬೇಕಿಲ್ಲ ಎಂದ ಉತ್ತರ ಪ್ರದೇಶ ಸಚಿವ

ಏಜೆನ್ಸೀಸ್
Published 4 ಫೆಬ್ರುವರಿ 2018, 4:37 IST
Last Updated 4 ಫೆಬ್ರುವರಿ 2018, 4:37 IST
ಕಾಸ್‌ಗಂಜ್ ಹಿಂಸಾಚಾರದ ಸಂದರ್ಭ ಬಸ್‌ಗೆ ಬೆಂಕಿ ಹಚ್ಚಿರುವುದು (ಸಂಗ್ರಹ ಚಿತ್ರ)
ಕಾಸ್‌ಗಂಜ್ ಹಿಂಸಾಚಾರದ ಸಂದರ್ಭ ಬಸ್‌ಗೆ ಬೆಂಕಿ ಹಚ್ಚಿರುವುದು (ಸಂಗ್ರಹ ಚಿತ್ರ)   

ಲಖನೌ: ಗಣರಾಜ್ಯೋತ್ಸವದಂದು ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದ್ದ ಹಿಂಸಾಚಾರವನ್ನು ಅಲ್ಲಿನ ಸಚಿವರೊಬ್ಬರು ‘ಸಣ್ಣ ಘಟನೆ’ ಎಂದು ಹೇಳಿದ್ದಾರೆ.

ಗಲಭೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಖಾದಿ ಮತ್ತು ಜವಳಿ ಸಚಿವ ಸತ್ಯದೇವ್ ಪಚೌರಿ, ‘ಅಂಥ ಸಣ್ಣ ಘಟನೆಗಳು ಎಲ್ಲೆಡೆ ನಡೆಯುತ್ತಿರುತ್ತವೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ’ ಎಂದು ಹೇಳಿದ್ದಾರೆ.

ಪರಿಸ್ಥಿತಿ ಹದಗೆಡುವ ಮುನ್ನವೇ ಕಾನೂನು ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಗಲಭೆಗೆ ಜಿಲ್ಲೆಯ ಅಧಿಕಾರಿಗಳನ್ನೇ ಹೊಣೆ ಮಾಡಿದ್ದಾರೆ. ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾಸ್‌ಗಂಜ್‌ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಯುವಕ ಚಂದನ್‌ ಗುಪ್ತಾ ಮೃತಪಟ್ಟು, ಹತ್ತಾರು ಜನ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 126 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.